ಅಮೃತ(ಗರ್ತಿಕೆರೆ): ಡಾಂಬರ್ ಹಾಟ್ ಮಿಕ್ಸಿಂಗ್ ಮಾಡುವ ಘಟಕವನ್ನು ಗ್ರಾಮದ ತಾರಿಗ ರಸ್ತೆಯ ಜನವಾಸವಿರುವ ಪ್ರದೇಶ ದಿಂದ ಸ್ಥಳಾಂತರಿಸಿ ಎಂದು ಸಾರ್ವಜನಿಕರಿಂದ ಗ್ರಾಮ ಪಂಚಾಯಿತಿಗೆ ಮನವಿ.

ತಾರಿಗ ರಸ್ತೆಯ ವಾಸಿಸುತ್ತಿರುವ ಸ್ಥಳದ ಸಮೀಪದಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಅನೇಕ ವರ್ಷಗಳಿಂದ ಹಾಟ್ ಮಿಕ್ಸಿ ಪ್ಲಾಂಟ್, ರಸ್ತೆ ಡಾಂಬರು ತಯಾರಿಕೆ ಘಟಕ ನಡೆಯುತ್ತಿದೆ.ಇದರಿಂದ ಉಂಟಾಗುತ್ತಿರುವ ಮಾಲಿನ್ಯ ಕಾರಕ ಕಪ್ಪು ಹೊಗೆ, ಕೆಟ್ಟ ವಾಸನೆ, ಗಾಳಿ ಮತ್ತು ಶಬ್ದ ಮಾಲಿನ್ಯದಿಂದ ವೃದ್ಧರು ಮಕ್ಕಳು ಮತ್ತು ಎಲ್ಲಾ ವರ್ಗವದವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದ್ದು ಈ ಬಗ್ಗೆ ಸ್ಥಳಿಯ ಆಡಳಿತಕ್ಕೆ ಹಲವು ಬಾರಿ ಮೌಖಿಕವಾಗಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯು “ಯಾವುದೇ ನಿಯಮಗಳನ್ನು ಪಾಲಿಸದೇ ಜನ ವಸತಿ ಪ್ರದೇಶದ ಸಮೀಪದಲ್ಲಿ ಹಾಟ್ ಮಿಕ್ಸ ಪ್ಲಾಂಟ್‌ಗಳನ್ನು ನಡೆಸಲು ಅನುಮತಿ ನೀಡಿರುವುದರಿಂದ ಕಾನೂನು ಉಲ್ಲಂಘನೆ ಮಾಡಿ ಈ ರೀತಿಯ ಹಾಟ್ ಮಿಕ್ಸ ಪ್ಲಾಂಟ್‌ಗನ್ನು ಜನವಸತಿ ಪ್ರದೇಶದ ಹತ್ತಿರ ನಡೆಸುತ್ತಿರುವುದರಿಂದ ಸದರಿ ಗ್ರಾಮದ ನಿವಾಸಿಗಳಾದ ನಮಗೆಲ್ಲಾರಿಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದಕ್ಕೆ ಕಾರಣವಾಗುತ್ತಿದೆ ಅದನ್ನು ಸ್ಥಳಾಂತರಿಸಿ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮ ಪಂಚಾಯಿತಿ ಪಿಡಿಒ ಸ್ಥಳ ಪರಿಶೀಲನೆ ಮಾಡಿ ಮುಂದಿನ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.
ಗ್ರಾಮ ಪಂಚಾಯತಿಗೆ ಮನವಿಯನ್ನು ಸಲ್ಲಿಸಿದರೂ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರ ಮನವಿಗೆ ಸ್ಪಂದಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಆ ಜನ ವಸತಿ ಪ್ರದೇಶ ದಿಂದ ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
















Leave a Reply