ರಿಪ್ಪನ್‌ಪೇಟೆ: SSLC ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ 10 ದಿನಗಳ ಸನಿವಾಸ ತರಬೇತಿ ಶಿಬಿರ ಉದ್ಘಾಟನೆ
ಜಿಲ್ಲಾ ಪಂಚಾಯತ್ ಶಿವಮೊಗ್ಗ, ಉಪನಿರ್ದೇಶಕರ ಕಚೇರಿ ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹೊಸನಗರ ಹಾಗೂ ಸಮಾಜ ಕಲ್ಯಾಣ ಇಲಾಖೆ ಹೊಸನಗರ ಇವರ ಸಹಯೋಗದಲ್ಲಿ SSLC ಕಲಿಕೆಯಲ್ಲಿ ಹಿಂದುಳಿದ 2025–26ನೇ ಸಾಲಿನ 60 ವಿದ್ಯಾರ್ಥಿಗಳಿಗಾಗಿ 10 ದಿನಗಳ ಸನಿವಾಸ ಕಲಿಕಾ ತರಬೇತಿ ಶಿಬಿರವನ್ನು ದಿನಾಂಕ 16-01-2025 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ (ಕರ್ನಾಟಕ ಪಬ್ಲಿಕ್ ಸ್ಕೂಲ್), ರಿಪ್ಪನ್‌ಪೇಟೆ, ಹೊಸನಗರ ತಾಲೂಕಿನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಹೊಸನಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ನೈತಿಕತೆ ಹಾಗೂ ಕಲಿಕಾ ಖಾತ್ರಿ ಸದುಪಯೋಗವಾಗಬೇಕಾದರೆ.ವಿದ್ಯಾರ್ಥಿಗಳು ಶಿಕ್ಷಕರು ಬೋಧಿಸಿದ ಪಾಠಗಳನ್ನು ನಿರಂತರ ಅಭ್ಯಾಸದ ಮೂಲಕ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಂಡಿ ಸೋಮಶೇಖರ್ ಅವರು ಮಾತನಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಇಂತಹ ಶಿಬಿರಗಳು ಅತ್ಯಂತ ಸಹಕಾರಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು SDMC ಸದಸ್ಯ ಪುನ್ನೋಜಿರಾವ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಕೆಸಿನಮನೆ ರತ್ನಾಕರ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಶೇಷಾಚಲ ಜಿ. ನಾಯ್ಕ್, BRC ಸಮನ್ವಯಾಧಿಕಾರಿ ರಂಗನಾಥ್, SDMC ಸದಸ್ಯರಾದ ನಿರಂಜನಮೂರ್ತಿ ಹಾಗೂ ಈಶ್ವರ್, SSLC ನೋಡಲ್ ಅಧಿಕಾರಿ ಮತ್ತು BRP ರಾಜೇಂದ್ರ, DIET ಉಪನ್ಯಾಸಕ ಹೂವಣ್ಣ, ECO ಕರಿಬಸಪ್ಪ, CRPಗಳಾದ ಮಂಜುನಾಥ್, ಮಹೇಶ್, ಸಂತೋಷ ಸೇರಿದಂತೆ ಪ್ರೌಢಶಾಲಾ ಶಿಕ್ಷಕರಾದ ರವಿಕುಮಾರ್, ರಾಮಕೃಷ್ಣ, ರೇಖಾವತಿ, ಕಲಾವತಿ, ಸಂಪನ್ಮೂಲ ಶಿಕ್ಷಕರಾದ ಕಾವ್ಯ, ದೀಪಾ ಮತ್ತು ಪೂರ್ಣಿಮಾ ಉಪಸ್ಥಿತರಿದ್ದರು.
ಕಲಿಕಾ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.















Leave a Reply