ಹೊಸನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಶಾಸಕರ ಕಾರ್ಯವೈಖರಿ ಮತ್ತು ಆವರ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ ತಿಳಿಸಿದರು.
ಇಂದು ಹೋಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ ಹೊಸನಗರ ಬಿಜೆಪಿ ಮಂಡಲ ನಾಳೆ ಒಂದಿಷ್ಟು ಅಜೆಂಡಾ ದೊಂದಿಗೆ ಪ್ರತಿಭಟನೆಯನ್ನು ಹಮ್ಮಿ ಕೊಂಡಿದ್ದು ಅವರು ಪ್ರತಿಭಟನೆಗೆ ನೀಡಿರುವ ಕಾರಣಗಳು ಅತ್ಯಂತ ಹಾಸ್ಯಸ್ಪದವಾಗಿದೆ ಅದರಲ್ಲಿ ಪ್ರಮುಖವಾಗಿ ಪೊಲೀಸ್ ಇಲಾಖೆ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಿರುವ ಅವರು ಒಬ್ಬ ವ್ಯಕ್ತಿಯ ಮೇಲೆ ನಾಲ್ಕೈದು ಮಂದಿ ಪೋಲೀಸ್ ಸಿಬ್ಬಂದಿ ಗಳ ಎದುರೇ ಮಾರಣಾಂತಿಕ ಹಲ್ಲೆ ನಡೆಸಿದ್ದು ಅದರ ವಿಡಿಯೋ ತುಣುಕುಗಳು ಸಹ ಇದೆ ಅದಕ್ಕೆ ಇಲಾಖೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಹಲ್ಲೆ ಒಳಗದವ ಕಾಂಗ್ರೇಸ್. ಬಿಜೆಪಿ ಅಥವಾ ಯಾವುದು ಪಕ್ಷದ ಕಾರ್ಯಕರ್ತನಾಗಿದ್ದರೂ ಸಹ ಇಲಾಖೆ ಇದೇ ಪ್ರಕರಣವನ್ನು ದಾಖಲಿಸುತ್ತಿತ್ತು ಇಲ್ಲಿ ಶಾಸಕರ ಹಸ್ತಕ್ಷೇಪವೇನಿದೆ ಎಂದು ಪ್ರಶ್ನಿಸಿದರು.

ಅಲ್ಲದೆ ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಶಾಸಕರ ಕೈ ಗೊಂಬೆಯಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂಬ ಅವರ ಆರೋಪ ಸತ್ಯಕ್ಕೆ ದೂರವಾದದ್ದು ಯಾವುದೇ ಇಲಾಖೆಯ ಸೌಲಭ್ಯವನ್ನು ಆಗಲಿ ಸರ್ಕಾರದ ವಿವಿಧ ಯೋಜನೆಗಳನ್ನಾಗಲಿ ಇಲಾಖೆಯ ಮೂಲಕ ಹೆಚ್ಚು ಪಡೆದಿರುವುದು ಬಿಜೆಪಿಗರೆ ಜೊತೆಗೆ ಮೆಸ್ಕಾಂ ಇಲಾಖೆಯ ವಿರುದ್ಧವೂ ಪ್ರತಿಭಟಿಸುವ ಹೇಳಿಕೆಯನ್ನು ನೀಡಿರುವ ಮಾಜಿ ಶಾಸಕರು ವಿದ್ಯುತ್ ಸಮಸ್ಯೆಯನ್ನು ನಿಮ್ಮ ಅಧಿಕಾರವಧಿಗಿಂತಲು 90ರಷ್ಟು ಭಾಗ ಸಮಸ್ಯೆಯನ್ನು ನಮ್ಮ ಶಾಸಕರು ಶಾಸಕರಾದ ಬಳಿಕ ಸರಿಪಡಿಸಿದ್ದಾರೆ ಜೊತೆಗೆ ಬಳ್ಳಾರಿ ಯಲ್ಲಿ ನಡೆದ ಗಲಭೆ ಮುಖ್ಯ ಕಾರಣ ಬಿಜೆಪಿಗರೆ ಎಂಬುದು ನೆನಪಿರಲಿ ಬಾಂಗ್ಲಾ ವಲಸಿಗರು ಬಗ್ಗೆ ಮಾತನಾಡುವ ನಿಮಗೆ ಕೇಂದ್ರ ಗುಪ್ತಚರ ಇಲಾಖೆ ಯಾರ ಹಿಡಿತದಲ್ಲಿದೆ ಕೇಂದ್ರದ ವೈಫಲ್ಯದಿಂದ ವಲಸಿಗರು ದೇಶ ಹಾಗೂ ರಾಜ್ಯದೊಳಗೆ ಪ್ರವೇಶವನ್ನು ಮಾಡಿದಾರೆ ಎಂದರು.

ಬಿಜೆಪಿಗರಿಗೆ ಪ್ರತಿಭಟಿಸಲು ಅವರದ್ದೇ ಕೇಂದ್ರ ಸರ್ಕಾರದ ಹಲವಾರು ವೈಫಲ್ಯಗಳಿವೆ ಅಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಂತಹ ಹಲವು ಜನಪರ ಯೋಜನೆಗಳನ್ನು ತಿದ್ದುಪಡಿ ಮಾಡುವ ಮೂಲಕ ಬಡವರು ಹಿಂದುಳಿದ ವರ್ಗದವರು ಕಾರ್ಮಿಕರ ಏಳಿಗೆಗಾಗಿ ಆರಂಭಿಸಿದ ಯೋಜನೆಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ ಈ ಕುರಿತಾಗಿ ಪ್ರತಿಭಟಿಸಿ ಬಡವರ ಹಿಂದುಳಿದ ವರ್ಗದವರ ಪರವಾಗಿದ್ದೇವೆ ಎಂಬುದನ್ನು ಮೊದಲು ಸಾಬೀತುಪಡಿಸಿ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಿದಂಬರ ಹೂವಿನ ಕೋಣೆ ಮುಖಂಡರಾದ ಪ್ರಭಾಕರ್, ಎಂಪಿ ಸುರೇಶ್, ಚನ್ನಬಸಪ್ಪ, ಲೋಕೇಶ್, ಚಂದ್ರಶೇಖರ್, ಅಣ್ಣಪ್ಪ, ಶೇಖರಪ್ಪ, ಮಂಜುನಾಥ್ ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ ಗುರು ಜಯನಗರ ಮುಂತಾದವರು ಉಪಸ್ಥಿತರಿದ್ದರು.













Leave a Reply