ಹೊಸನಗರ: ತಾಲೂಕಿನ ಹಿಂದುಳಿದ ವರ್ಗಗಳ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಗೇರುಪುರ ಇಲ್ಲಿನ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ತರುಣ್ ಓ ವೈ ಮತ್ತು ಒಂಭತ್ತನೇ ತರಗತಿಯ ಲಕ್ಷ್ಮಿಕಾಂತ್ ಎಂ ಆರ್ ರವರು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೊಪ್ಪಳ ದ ಜಿಲ್ಲಾ ಕೇಂದ್ರದಲ್ಲಿ ನೆಡೆದ ಪ್ರೌಢಶಾಲೆಗಳ ಹದಿನೇಳು ವರ್ಷ ವಯೋಮಿತಿಯವರ ಬಾಲಕರ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಮಕ್ಕಳಿಗೆ ಶಾಲೆಯ ಪ್ರಾಂಶುಪಾಲರಾದ ಯೋಗೇಶ್ ಹೆಚ್ ಹೆಬ್ಬಳಗೆರೆ ಯವರು ಹಾಗೂ ಸಿಬ್ಬಂದಿಗಳು ಮತ್ತು ಪೋಷಕರು ಅಭಿನಂದಿಸಿರುತ್ತಾರೆ.
















Leave a Reply