ಶಿವಮೊಗ್ಗ: ನಗರದ ಶಾರದಮ್ಮ ಬಡಾವಣೆ ಹಾಗೂ ರಾಜೇಂದ್ರ ನಗರದಲ್ಲಿ ಎದುರಾಗಿರುವ ಮೂಲಭೂತ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಬೆಳಿಗ್ಗೆ ವಾರ್ಡ್ ನಂಬರ್ 1 ಮತ್ತು 9ರಲ್ಲಿ ಭೇಟಿ ನೀಡಿದ ಅವರು, ಶಾರದಮ್ಮ ಬಡಾವಣೆಯ ರಸ್ತೆ ಮತ್ತು ಯುಜಿಡಿ ಸಮಸ್ಯೆಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು. ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ, ಕೂಡಲೇ ಸರಿಪಡಿಸಲು ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.
ಬಳಿಕ ರಾಜೇಂದ್ರ ನಗರದ ಪಾರ್ಕ್ ವೀಕ್ಷಣೆ ನಡೆಸಿ, ಉದ್ಯಾನವನಗಳು ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಪೂರಕವಾಗಿರಬೇಕು. ಅಲ್ಲಿನ ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷರು ಹಾಗೂ ಒಂದನೇ ಮಹಾಶಕ್ತಿ ಕೇಂದ್ರದ ಪ್ರಭಾರಿಗಳಾದ ಗಾಡಿಕೊಪ್ಪ ಶ್ರೀ ಕುಮಾರ್, ಬೊಮ್ಮನಕಟ್ಟೆ ರಾಜು, ಪ್ರಮುಖರಾದ ನಾಗರಾಜ್, ಮಹಾನಗರ ಪಾಲಿಕೆಯ ಅಧಿಕಾರಿಗಳು, ಬಡಾವಣೆಯ ಪ್ರಮುಖರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.















Leave a Reply