ಹೊಸನಗರ: ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಹಾಗೂ ಮಂಗಗಳ ಹಾವಾಳಿ ಹೆಚ್ಚಾಗಿದ್ದು ಇದನ್ನು ನಿಯಂತ್ರಣ ಮಾಡಬೇಕಾದ ಪಟ್ಟಣ ಪಂಚಾಯತಿ ಪಟ್ಟಣ ಪಂಚಾಯಿತಿಯ ಆಸ್ತಿ ಎಂದು ಪರಿಗಣಿಸಿದಂತಿದೆ ಎಂದು ಬಿಜೆಪಿ ಹೊಸನಗರ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ಸಂಜೀವ್ ರವರು ಹೇಳಿದರು.
ಹೈಕೋರ್ಟ್ ಸುಪ್ರೀಂಕೋಟ್ ಹಲವು ಬಾರಿ ಬೀದಿ ನಾಯಿಗಳಿಂದ ಮುಕ್ತವಾಗಿಡಲು ಹೇಳತ್ತಾ ಬಂದರೂ ಪಟ್ಟಣ ಪಂಚಾಯಿತಿ ಕ್ಯಾರೇ ಅನ್ನೊತ್ತಿಲ್ಲ ಅದೇ ರೀತಿ ಮಂಗಗಳು ಮನೆಯೊಳಗೆ ನುಗ್ಗಿ ದಾಂದಲೆ ಮಾಡುತ್ತಿದ್ದರೂ ಪಟ್ಟಣ ಪಂಚಾಯಿತಿ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಪಟ್ಟಣ ಪಂಚಾಯಿತಿ ನಾಯಿಗಳು ಮತ್ತು ಮಂಗಗಳು ಪಟ್ಟಣ ಪಂಚಾಯಿತಿ ಆಸ್ತಿ ಎಂಬ ರೀತಿಯಲ್ಲಿ ನೋಡುತ್ತಿದೆ ಈಗಾಗಲೇ ನಾಯಿಗಳಿಗೆ ಶಸ್ತç ಚಿಕಿತ್ಸೆ ಮಾಡಿ ನಿಯಂತ್ರಣ ಮಾಡಲಾಗುವುದು ಎಂದು ಹೇಳಿ ಆರು ತಿಂಗಳು ಕಳೆದರೂ ಇಲ್ಲಿಯವರೆವಿಗೆ ಯಾವುದೇ ಕ್ರಮ ಕೈಗೊಳ್ಳದೇ ಬರೀ ಪತ್ರ ವ್ಯವಹಾರದಲ್ಲಿಯೇ ಮುಳುಗಿದೆ ಎಂದರು.
ಮಂಗಗಳ ಹಾವಾಳಿಯಿಂದ ಜನರು ಬೇಸರಗೊಂಡಿದ್ದು ಇದರ ಜೊತೆಗೆ ಹೊಸನಗರ ಸುತ್ತ ಮುತ್ತ ಮಂಗನಕಾಯಿಲೆ ಪ್ರಾರಂಬವಾಗಿದೆ ಮಂಗಗಳನ್ನು ತಕ್ಷಣ ನಿಯಂತ್ರಿಸದಿದ್ದರೇ ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯ ಜನರು ಮಂಗನಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಚುನಾವಣೆಗೆ ಬೀದಿ ನಾಯಿ ಮಂಗಗಳೇ ಅಭ್ಯರ್ಥಿಗಳು?
ಪಟ್ಟಣ ಪಂಚಾಯಿತಿಯ ಆಡಳಿತಾವಧಿ ಮುಗಿದಿದ್ದು ಅತೀ ಸಮೀಪದಲ್ಲಿಯೇ ಪಟ್ಟಣ ಪಂಚಾಯತಿ ಚುನಾವಣೆ ನಡೆಯಲಿದೆ ಪಟ್ಟಣ ಪಂಚಾಯತಿಯ ೧೧ವಾರ್ಡ್ಗಳಲ್ಲಿ ಜನಸಂಖ್ಯೆಗಿಂತ ಹೆಚ್ಚು ಮಂಗಗಳು ಬೀದಿ ನಾಯಿಗಳೆ ಇರುವುದರಿಂದ ಒಂದೊಂದು ಪಕ್ಷದಿಂದ ಒಂದೊಂದು ಬೀದಿ ನಾಯಿ ಮಂಗಗಳನ್ನು ನಿಲ್ಲಿಸುವುದೇ ಲೇಸು ಎಂಬಂತೆ ಕಾಣುತ್ತಿದೆ.
ಪಟ್ಟಣ ಪಂಚಾಯಿತಿಯಲ್ಲಿ ಬೀದಿ ನಾಯಿ ಮಂಗಗಳನ್ನು ನಿಯಂತ್ರಿಸದಿದ್ದರೇ ಮುಂದಿನ ದಿನದಲ್ಲಿ ಬಿಜೆಪಿ ಪಕ್ಷದಿಂದ ಪಟ್ಟಣ ಪಂಚಾಯತಿಗೆ ಮುತ್ತಿಗೆ ಹಾಕಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.













Leave a Reply