ಹೊಸನಗರ ಮಾರಿಕಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್ ದತ್ತಾತ್ರೇಯ ಆಯ್ಕೆ

NAADI NEWS 20260107 165420 0000 ಹೊಸನಗರ ಮಾರಿಕಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್ ದತ್ತಾತ್ರೇಯ ಆಯ್ಕೆ
Spread the love

ಹೊಸನಗರ: ಜನವರಿ ೨೦ರಿಂದ ೨೮ರವರೆವಿಗೆ ಹೊಸನಗರ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ಮಾರಿಗುಡಿ ಜಾತ್ರೆ ಹಾಗೂ  ಮಾರಿಕಾಂಬ ಜಾತ್ರೆ ಸಮಿಪಿಸುತ್ತಿದ್ದು ಮಾರಿಗುಡಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್ ದತ್ತಾತ್ರೇಯರವರನ್ನು ಆಯ್ಕೆ ಮಾಡಲಾಯಿತ್ತು.
   ಹೊಸನಗರದ ದ್ಯಾವರ್ಸದಲ್ಲಿರುವ ಮಾರಿಯಮ್ಮನವರ ತಾಯಿ ಮನೆ ಎನಿಸಿಕೊಂಡಿರುವ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಎರಡು ದೇವಸ್ಥಾನ ಕಮಿಟಿಯ ಸಭೆಯನ್ನು ಎರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತ್ತು.
ಈ ಹಿಂದೆ ಬಹಳಷ್ಟು ವರ್ಷಗಳ ಕಾಲ ಮಾರಿಕಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್ ಲಕ್ಷ್ಮಿನಾರಾಯಣರಾವ್‌ ರವರು ಸೇವೆ ಸಲ್ಲಿಸಿ ಇತ್ತಿಚೇಗೆ ನಿಧನರಾಗಿದ್ದು ಆ ಸ್ಥಾನವನ್ನು ಅವರ ಪುತ್ರರಾದ ದತ್ತಾತ್ರೇಯರವರಿಗೆ ವಹಿಸಲು ಸಮಿತಿ ತೀರ್ಮಾನಿಸಿದ್ದು ಅದರಂತೆ ಅವಿರೋಧವಾಗಿ ಆಯ್ಕೆಯಾದರು.
     ಈ ಸಂದರ್ಭದಲ್ಲಿ ದುರ್ಗಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಹೆಚ್.ಎನ್ ಶ್ರೀಪತಿರಾವ್ ದೇವಸ್ಥಾನ ಸಮಿತಿಯ ಹಿರಿಯರಾದ ಶ್ರೀನಿವಾಸ್ ಕಾಮತ್, ಪರಮೇಶ್ವರರಾವ್, ಪ್ರಬಾಕರ್, ಗಣಪತಿ-ಪಾರ್ವತಿ ಮಹೇಶ್ವರ ದೇವಸ್ತಾನ ಸಮಿತಿಯ ಅಧ್ಯಕ್ಷರಾದ ಸದಾಶಿವ ಶ್ರೇಷ್ಟಿ, ಪಿ. ಮನೋಹರ, ದ್ಯಾವರ್ಸ ಸುಬ್ರಹ್ಮಣ್ಯ, ಎನ್ ದತ್ತಾತ್ರೇಯ ಉಡುಪ, ದೇವಸ್ಥಾನ ಸಮಿತಿಯ ವ್ಯವಸ್ಥಾಪಕರಾದ ನಾಗರಾಜ್, ವಿಜಯಕುಮಾರ್, ಹೆಚ್.ಕೆ ಗುರುರಾಜ್,  ಹೆಚ್.ಎಸ್ ಗಿರೀಶ್,  ಗೋಪಾಲ್, ವಾದಿರಾಜ್ ಭಟ್, ಟಿ.ಆರ್. ಸುನೀಲ್ ಕುಮಾರ್, ನಿತ್ಯಾನಂದ ಹೆಚ್.ಎಂ. ಗುತ್ತಿಗೆದಾರರಾದ ಮಹಾಬಲ, ಶ್ರೀಧರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *