ಶರಾವತಿ ಹಿನ್ನೀರಿನ ಪ್ರದೇಶಕ್ಕೆ ತಹಶಿಲ್ದಾರ್ ಭರತ್ ರಾಜ್ ಭೇಟಿ
ಹೊಸನಗರ : ಹೊಸನಗರ ಪಟ್ಟಣದ ಸಮೀಪದ ಕಲ್ಲುಹಳ್ಳ ಸೇತುವೆಯ ಬಳಿ ಕಸದ ರಾಶಿ ,ಪ್ಲಾಸ್ಟಿಕ್ ತ್ಯಾಜ್ಯವನ್ನು ಶರಾವತಿ ಹಿನ್ನೀರಿಗೆ ಹಾಕಲಾಗುತ್ತಿರುವ ದಯನೀಯ ಪರಿಸ್ಥಿತಿಯನ್ನು ನಾಡಿ ನ್ಯೂಸ್ ತೆರೆದಿಟ್ಟಿತ್ತು.

ನಾಡಿ ನ್ಯೂಸ್ ಮತ್ತು ಹೊಸ ದಿಗಂತ ಮಾಡಿದ ವರದಿ ಜಿಲ್ಲಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿ ವ್ಯಾಪಕವಾಗಿ ಸದ್ದು ಮಾಡಿತ್ತು. ತಕ್ಷಣ ಸ್ಪಂದಿಸಿದ ಮಾನ್ಯ ತಾಲೂಕು ದಂಢಾದಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದರು.
https://naadinews.com/save-sharavathi-backwater-environment-crisis-save-hosanagara/

ವರದಿಯಾದ ದಿನವೇ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಗ್ರಾಪಂ ಸದಸ್ಯ ಸತೀಶ್ ನಮ್ಮ ವರದಿಯನ್ನು ಉಲ್ಲೇಖಿಸಿ ಸಭೆಯಲ್ಲಿ ಚರ್ಚೆ ಮಾಡಿದ್ದರು. ಗ್ರಾಮಾಡಳಿತ ಆ ಪ್ರದೇಶದ ಸ್ವಚ್ಚತಾ ಕಾರ್ಯ ಕೈಗೊಳ್ಳುವ ಜೊತೆ ಅಲ್ಲಿ ಸಿಸಿಟಿವಿ ಅಳವಡಿಕೆ , ಸೂಚನ ಫಲಕ, ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು ಎಂದು ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
5 ದಿನದಲ್ಲಿ ಗ್ರಾಮಾಡಳಿತ ತಮ್ಮ ಅಧಿಕಾರಿಗಳೋಂದಿಗೆ ಸಂಪೂರ್ಣ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿ ಹಿನ್ನೀರಿನ ಪ್ರದೇಶವನ್ನು ಸ್ವಚ್ಚಗೊಳಿಸಿದ್ದಾರೆ.

ಗ್ರಾ.ಪಂ ಅಧ್ಯಕ್ಷರಾದ ಪ್ರವೀಣ ಜಿ.ಎನ್ ನಾಡಿ ನ್ಯೂಸ್ ನೊಂದಿಗೆ ಮಾತನಾಡಿ , “ ಇನ್ನು ಮುಂದೆ ನದಿಗೆ ಹತ್ತಿರ ಯಾವುದೇ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದರು.
ಸ್ಥಳೀಯ ಅಧಿಕಾರಿಗಳು ಮತ್ತು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯು ಈ
ಸ್ಥಳವನ್ನು ಸ್ವಚ್ಛಗೊಳಿಸಿ, ಜನರಲ್ಲಿ ಕಾನೂನು ಕಾರ್ಯಾಚರಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಈ ಸ್ವಚ್ಛತಾ ಕಾರ್ಯದ ಕುರಿತು ಸ್ಪಂದಿಸಿದ ಗ್ರಾ.ಪಂ ಸದಸ್ಯ ಸತೀಶ್ ,ಧರ್ಮಪ್ಪ ಸೇರಿದಂತೆ ಅನೇಕರು ಸ್ಥಳದಲ್ಲಿದ್ದು ಸ್ವಚ್ಚತಾ ಕಾರ್ಯದ ಕಾಮಗಾರಿಯನ್ನು ಗಮನಿಸಿದರು. ಅಧಿಕಾರಿಗಳು ಮತ್ತು ಗ್ರಾ.ಪಂ ಸದಸ್ಯರು ಕೂಡಲೇ ಸ್ಪಂದಿಸಿ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದು ಪ್ರಶಂಸನೀಯ.
ನಾಗರಿಕ ಶಿಷ್ಟಾಚಾರದ ಪಾಲನೆ ಅಗತ್ಯ: ಗ್ರಾಮಸ್ಥರು, ಸಾರ್ವಜನಿಕರು ಕಸ, ಪ್ಲಾಸ್ಟಿಕ್ ತ್ಯಾಜ್ಯ ಇಲ್ಲಿ ತಂದು ಹಾಕಬಾರದು, ಶರಾವತಿ ಹಿನ್ನೀರಿನ ಪರಿಸರ ರಕ್ಷಣೆ ಜವಬ್ದಾರಿ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಅದನ್ನು ಪಾಲಿಸೋಣ ಎಂದು ಗ್ರಾಮ ಪಂಚಾಯ್ತಿ ಮನವಿ ಮಾಡಿಕೊಂಡಿದೆ.














Leave a Reply