ಶಿವಮೊಗ್ಗ: ಶಿವಮೊಗ್ಗದ ಪ್ರೆಸ್ ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಮಲೆನಾಡಿನ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳನ್ನು ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತಂದರು. ದಶಕಗಳಿಂದ ಅನ್ಯಾಯ ಅನುಭವಿಸುತ್ತಿರುವ ಶರಾವತಿ ಸಂತ್ರಸ್ಥರಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಕೊಗಿಲು ಸೇರಿದಂತೆ ನಗರ ಪ್ರದೇಶಗಳಲ್ಲಿನ ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಒದಗಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳುತ್ತಿರುವುದು ಒಲೈಕೆ ರಾಜಕಾರಣದ ಪರಮಾವಧಿ. ಆದರೆ ಅದೇ ಸರ್ಕಾರ, ಮಲೆನಾಡಿನಲ್ಲಿ ಮನೆ- ಕೃಷಿ ಭೂಮಿ ಕಳೆದುಕೊಂಡು ಜೀವನ ಸಾಗಿಸುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳ ಬಗ್ಗೆ ಮೌನ ವಹಿಸಿರುವುದು ಅಚ್ಚರಿಯ ಸಂಗತಿಯೆಂದು ಆರಗ ಜ್ಞಾನೇಂದ್ರ ಟೀಕಿಸಿದರು.
“ಬೆಂಗಳೂರಿನ ಅಕ್ರಮ ವಲಸಿಗರಿಗೆ ಆದ್ಯತೆ ನೀಡುವ ಸರ್ಕಾರಕ್ಕೆ, ರಾಜ್ಯದ ಜನರು ಬೆಳಕಿಗಾಗಿ ತಮ್ಮ ನೆಲ-ಮನೆ ಕಳೆದುಕೊಂಡು ಶರಾವತಿ ಸಂತ್ರಸ್ಥರು ಕತ್ತಲಲ್ಲಿರುವಾಗ ಅವರು ನೋವು ಕಾಣಿಸುತ್ತಿಲ್ಲವೇ?” ಎಂದು ಪ್ರಶ್ನಿಸಿದ ಅವರು, ಒಂದೇ ಸಮುದಾಯದ ಮತಗಳಿಗಾಗಿ ಸರ್ಕಾರ ಹರಿಬರಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಬದಲಾಗಿ ಸ್ಪಷ್ಟವಾದ ವೋಟ್ ಬ್ಯಾಂಕ್ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಆರಗ ಜ್ಞಾನೇಂದ್ರ, ಮಲೆನಾಡಿನ ಜನತೆ ರಾಜ್ಯ ಸರ್ಕಾರದ ಈ ದ್ವಂದ್ವ ನೀತಿಯನ್ನು ಪ್ರಶ್ನಿಸುವ ಸಮಯ ಬಂದಿದೆ ಎಂದರು.
ಶರಾವತಿ ಸಂತ್ರಸ್ಥರಿಗೆ ನ್ಯಾಯಸಮ್ಮತ ಪರಿಹಾರ, ಹಕ್ಕು ಪತ್ರಗಳು ಹಾಗೂ ಶಾಶ್ವತ ಪರಿಹಾರಗಳನ್ನು ನೀಡುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನವೀನ್, ಹೆದ್ದೂರು,ಶರಾವತಿ ಮುಳುಗಡೆ ಹೋರಾಟ ಸಮಿತಿಯ ಅಧ್ಯಕ್ಷರು ಹೂವಪ್ಪ ,ಹಣಗೆರೆ ಕಟ್ಟೆ ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ,ಉಪಾಧ್ಯಕ್ಷ ಅಶೋಕ್ , ಬಿ.ಎಂ ಕೃಷ್ಣಮೂರ್ತಿ,ಸಕ್ಲಾಪುರ ರಾಮಣ್ಣ ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.















Leave a Reply