ರಿಪ್ಪನ್ ಪೇಟೆ:ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಶ್ರೀನಂದ ವಾಟರ್ ವಾಶ್ ಬಳಿ ಇರುವ ತೆರೆದ ಬಾವಿಯೊಳಗೆ ಗೋವು ತಪ್ಪಿ ಬಿದ್ದ ಘಟನೆ ನಡೆದಿದೆ. ಬಾವಿ ಸುಮಾರು 10 ಅಡಿ ಆಳವಿತ್ತು.
ಬಾವಿಯೊಳಗೆ ಬಿದ್ದ ಗೋವು ತೀವ್ರವಾಗಿ ಒದ್ದಾಟವನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಸ್ಪಂದಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಸ್ಥಳೀಯರ ಸಹಕಾರದಿಂದ ಜೆಸಿಬಿಯನ್ನು ತರಿಸಿ, ಬಹು ಪ್ರಯತ್ನದ ನಂತರ ಗೋವುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಲಾಯಿತು. ರಕ್ಷಣೆಯ ವೇಳೆ ಯಾವುದೇ ಅಪಾಯ ಸಂಭವಿಸದೆ ಗೋವು ಜೀವ ಉಳಿದಿದ್ದು ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಕಗ್ಗಲಿ ಲಿಂಗಪ್ಪ, ಮಂಜು ಆಚಾರ್, ಫ್ಯಾನ್ಸಿ ರಮೇಶ್, ಶ್ರೀನಿವಾಸ್ ಆಚಾರ್, ಗಣೇಶ್, ಸಂತೋಷ್,ರವಿ ಸೇರಿದಂತೆ ಹಲವರು ಸ್ಥಳದಲ್ಲಿದ್ದು ಮಾನವೀಯತೆ ಮೆರೆದರು.















Leave a Reply