ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮ
ರಿಪ್ಪನ್ ಪೇಟೆ: ಸಮೀಪದ ತಳಲೆ ಗ್ರಾಮದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ವಾಲಿಬಾಲ್ ಕ್ಲಬ್ ವತಿಯಿಂದ 3ನೇ ವರ್ಷದ ಗ್ರಾಮಾಂತರ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ನಾಳೆ (ಜ.3) ಆಯೋಜಿಸಲಾಗಿದೆ.
ಈ ಪಂದ್ಯಾವಳಿಯ ಅಂಗವಾಗಿ ಸುತ್ತಮುತ್ತಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ
ಶ್ರೀ ವೀರಭದ್ರಪ್ಪ – ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶ್ರೀ ಗಣಪತಿ – ನಿವೃತ್ತ ಶಿಕ್ಷಕರು
ಶ್ರೀ ಭೋಜಪ್ಪ ಬಿ. – ರಾಷ್ಟ್ರ ಪ್ರಶಸ್ತಿ ಪುರಸ್ಕೃತರು
ಶ್ರೀಮತಿ ಶಿಲ್ಪಾ – ಜಿಲ್ಲಾ ಅತ್ಯುತ್ತಮ ಶಿಕ್ಷಕಿ
ಶ್ರೀ ಗಂಗಾಧರ – ಮೆಸ್ಕಾಂ ನೌಕರರು
ಕು. ಸೊನಾಲಿ – ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು
ಆಯಿಶ್ರೀ – ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು
ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ವತಿಯಿಂದ ಆಕರ್ಷಕ ಬಹುಮಾನ ನೀಡಲಾಗುತ್ತಿದೆ.
ಪ್ರಥಮ ಬಹುಮಾನ : ರೂ. 20,000
ದ್ವಿತೀಯ ಬಹುಮಾನ: ರೂ. 15,000
ತೃತೀಯ ಬಹುಮಾನ :ರೂ. 10,000
ಚತುರ್ಥ ಬಹುಮಾನ : ರೂ.5,000
ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲು ವಾಲಿಬಾಲ್ ಕ್ಲಬ್ ಕಾರ್ಯಕಾರಿ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕ್ಲಬ್‌ನ ಅಧ್ಯಕ್ಷರಾಗಿ ಶ್ರೇಯಸ್ ಚೂಡಾಮಣಿ, ಉಪಾಧ್ಯಕ್ಷರಾಗಿ ಆಸೀಫ್ ಮೂಗುಡ್ತಿ, ಕಾರ್ಯದರ್ಶಿಯಾಗಿ ಶ್ರೀ ವೆಂಕಟೇಶ್, ಖಜಾಂಚಿಯಾಗಿ ಶ್ರೀ ರಾಕೇಶ್ (ಕಗ್ಗಲಿ) ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ.
ಈ 3ನೇ ವರ್ಷದ ಗ್ರಾಮಾಂತರ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.
ಪಂದ್ಯಾವಳಿಯ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 9663888395 | 8105354634 | 9686897564












Leave a Reply