ಚಿಕ್ಕಜೇನಿ: ಸಮೀಪದ ಹಿರೇಜೇನಿ ಗ್ರಾಮದ ಕಾರೇಮಟ್ಟಿಯಲ್ಲಿ ಗಗನ್ ಕ್ರಿಕೆಟರ್ಸ್ ವತಿಯಿಂದ 4ನೇ ವರ್ಷದ 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಈ ಪಂದ್ಯಾವಳಿ ಜನವರಿ 3ರಂದು ಕಾರೇಮಟ್ಟಿ ಸರ್ಕಾರಿ ಶಾಲೆಯ ಹಿಂಭಾಗದ ಮೈದಾನದಲ್ಲಿ ನಡೆಯಲಿದೆ. ಗ್ರಾಮೀಣ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಟೂರ್ನಿಗೆ ಜಿಲ್ಲೆಯ ನಾನಾ ಭಾಗದ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಪಂದ್ಯಾವಳಿಯಲ್ಲಿ ವಿಜೇತ ಮತ್ತು ಉಪವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ಆಯೋಜಕರು ನೀಡಲಿದ್ದಾರೆ. ಜೊತೆಗೆ ಕ್ರೀಡಾಭಿಮಾನಿಗಳಿಗಾಗಿ ವಿಶೇಷ ಲಾಟರಿ ಬಹುಮಾನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಬೆಸ್ಟ್ ಬ್ಯಾಟ್ಸ್ಮ್ಯಾನ್ ಬೆಸ್ಟ್ ಬೌಲರ್ ಬೆಸ್ಟ್ ಕೀಪರ್ ಬಹುಮಾನವು ಇರಲಿದೆ.
ಕ್ರೀಡೆ ಮೂಲಕ ಯುವಜನರಲ್ಲಿ ಸಹಕಾರ, ಸ್ನೇಹಭಾವ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಮಹತ್ವ ಪಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಗಗನ್ ಕ್ರಿಕೆಟರ್ಸ್ ತಂಡ ಮನವಿ ಮಾಡಿದೆ.












Leave a Reply