ಪ್ಲಾಸ್ಟಿಕ್ ಕಸದ ನಡುವೆ ನಲುಗುತ್ತಿರುವ ಶರಾವತಿ| ತಹಶೀಲ್ದಾರ್ ಕಛೇರಿ ಯಿಂದ ಕೇವಲ 1 ಕಿ.ಮೀ ದೂರದಲ್ಲೆ ಇದೆ ಪ್ರದೇಶ
ವಿಶೇಷ ವರದಿ:ಎನ್.ಕಾರ್ತಿಕ್ ಕೌಂಡಿನ್ಯ
ಹೊಸನಗರ: ಪಟ್ಟಣದ ರಾಣಿಬೆನ್ನೂರು ಹಾಗೂ ಬೈಂದೂರು ಮುಖ್ಯ ರಾಜ್ಯ ಹೆದ್ದಾರಿ ಪಕ್ಕದಲ್ಲೆ ಇರುವ ಕಲ್ಲುಹಳ್ಳ ಸೇತುವೆ ಸಮೀಪ ಶರಾವತಿ ಒಡಲಿಗೆ ಪಟ್ಟಣದ ತ್ಯಾಜ್ಯಗಳು ಬಂದು ಸೇರುತ್ತಿವೆ.
ಶಾಂತ ಕಣಿವೆ, ಸ್ವಚ್ಚ ಕಣಿವೆ ಎಂದು ಹೆಸರು ಪಡೆದಿದ್ದ ಶರಾವತಿ ಹಿನ್ನೀರು ಇಂದು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿದೆ. ಸುತ್ತಮುತ್ತಲಿನ ಕೋಳಿ ಮಾಂಸದಂಗಡಿಯ ತ್ಯಾಜ್ಯಗಳು ಕೂಡ ಹಿನ್ನೀರಿನ ಪ್ರದೇಶ ಸೇರಿ ಗಬ್ಬೆದು ನಾರುತ್ತಿದೆ.

ಸಜ್ಜನರ ಪಟ್ಟಣದಲ್ಲಿ ಕಡುಕರ ತಾಣವು ತಲೆ ಎತ್ತಿದೆ. ಕಲ್ಲುಹಳ್ಳ ಸೇತುವೆ ಸಮೀಪದಲ್ಲಿ ಈಗ ಕುಡುಕರದ್ದೆ ಹಾವಳಿ, ಆ ರೀತಿಯ ದುರ್ವಾಸನೆ ನಡುವೆಯೂ ಪುಂಡರು ಅಲ್ಲಿಯೇ ಬಂದು ಮದ್ಯಪಾನದ ಅಡ್ಡೆಗಳನ್ನಾಗಿ ಮಾಡಿಕೊಂಡು ಶರಾವತಿ ಒಡಲೊಳಗೆ ಬೀರು ಬಾಟಲಿ,ಪ್ಲಾಸ್ಟಿಕ್ ತ್ಯಾಜ್ಯ ಸಹಿತ ಕಸದ ರಾಶಿಯನ್ನು ಹಾಕುತ್ತಿದ್ದಾರೆ. ಪೋಲಿಸ್ ಇಲಾಖೆಯೂ ಇತ್ತ ಗಮನಹರಿಸಬೇಕಿದೆ.
ವಾಸ್ತವವಾಗಿ ಹೊಸನಗರ ಪಟ್ಟಣಕ್ಕೆ ಅಂಟಿಕೊಂಡಿರುವ ಈ ಕಲ್ಲುಹಳ್ಳ ಸೇತುವೆ ಸಮೀಪದ ಪ್ರದೇಶವು ಪಟ್ಟಣದ ಕಸ ದಿಂದಲೇ ಆ ಪ್ರದೇಶ ಮಾಲಿನ್ಯಕೀಡಾಗಿದರೂ ಆ ಜಾಗ ಗಡಿಭಾಗವಾಗಿದ್ದು ಎಂ.ಗುಡ್ಡೆಕೊಪ್ಪ ಪಂಚಾಯತಿಯ ಗಂಗನಕೊಪ್ಪ ಗ್ರಾಮ ಸೇರಿದ್ದಾಗಿರುತ್ತದೆ .ಆ ಕಾರಣ ಹೊಸನಗರ ಪಟ್ಟಣ ಪಂಚಾಯತ್ ಮತ್ತು ಎಂ.ಗುಡ್ಡೆಕೊಪ್ಪ ಪಂಚಾಯತಿ ಈ ಎರಡು ಆಡಳಿತವು ಆ ಪ್ರದೇಶವನ್ನು ನಿರ್ಲಕ್ಷ್ಯಿಸಿದೆ.

ಹೊಸನಗರ ತಹಶಿಲ್ದಾರ್ ಕಛೇರಿ ಯಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಪಕ್ಕದಲ್ಲೆ ಶಾಲೆ – ಕಾಲೇಜುಗಳು ಕೂಡ ಇವೆ, ಈ ದುರ್ವಾಸೆ ಯಿಂದ ವಿದ್ಯಾರ್ಥಿಗಳು ಮುಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕಲ್ಲುಹಳ್ಳ ಸೇತುವೆಯ ಸಮೀಪದ ಶರಾವತಿ ಹಿನ್ನೀರು ಪ್ರದೇಶದ ರಕ್ಷಣೆಯೊಂದಿಗೆ ಪರಿಸರ ಸಂರಕ್ಷಿಸುವ ಜಾಗೃತಿ ಜನಮಾನಸದಲ್ಲೂ ಇರಬೇಕಾಗಿದೆ. ಸಾರ್ವಜನಿಕರು ಈ ಪ್ರದೇಶದಲ್ಲಿ ಕಸವನ್ನು ತಂದು ಹಾಕುವುದನ್ನು ನಿಲ್ಲಿಸಿ ನಾಗರಿಕ ಶಿಷ್ಟಾಚಾರವನ್ನು ಪಾಲಿಸಬೇಕಾಗಿದೆ.

ಇನ್ನಾದರೂ ಸಂಬಂಧಿಸಿದ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ,ಹೊಸನಗರ ಪಟ್ಟಣ ಪಂಚಾಯತಿ ಮತ್ತು ತಾಲೂಕು ಆಡಳಿತ ಇತ್ತಕಡೆ ಗಮನಹರಿಸಿಬೇಕಿದೆ. ಸ್ವಚ್ಛ ಹೊಸನಗರ ನಿರ್ಮಾಣವಾಗಲಿ ಎಂಬುದುವುದು ನಮ್ಮ ಕಳಕಳಿ.
















Leave a Reply