ಬೆಳ್ಳೂರು: ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಸ್ವಾವಲಂಬನೆಗೆ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಿವಮೊಗ್ಗ–ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ,ಶಿಮುಲ್ ಅಧ್ಯಕ್ಷ ವಿದ್ಯಾಧರ ಹೇಳಿದರು. ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶಿವಮೊಗ್ಗ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಶಿಮುಲ್ ಹಾಗೂ ಬೆಳ್ಳೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ 2025–26ನೇ ಸಾಲಿನ ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ, ಉಚಿತ ಜಾನುವಾರು ಚಿಕಿತ್ಸಾ ಶಿಬಿರ ಹಾಗೂ ರೇಬಿಸ್ ಲಸಿಕಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಸು ಸಾಕಾಣಿಕೆಯಿಂದ ಹಾಲು ಉತ್ಪಾದನೆ ಹಾಗೂ ಮಾರಾಟದ ಮೂಲಕ ನಿರಂತರ ಆದಾಯ ಲಭ್ಯವಾಗುತ್ತದೆ. ಜೊತೆಗೆ ಜಾನುವಾರುಗಳ ಸಗಣಿಯಿಂದ ಅಡಿಕೆ ತೋಟ ಸೇರಿದಂತೆ ವಿವಿಧ ಬೆಳೆಗಳಿಗೆ ಉತ್ತಮ ಸಾವಯವ ಗೊಬ್ಬರ ಸಿಗುತ್ತದೆ. ಇದರಿಂದ ರೈತರ ಜೀವನಮಟ್ಟ ಸುಧಾರಣೆಯಾಗುತ್ತದೆ ಎಂದರು. ಕೆಎಂಎಫ್ ಸಂಸ್ಥೆ ಹಲವು ಸವಾಲುಗಳ ನಡುವೆಯೂ ರೈತರಿಗೆ ಹಾಲಿನ ದರ ಕಡಿಮೆ ಮಾಡಿಲ್ಲ. ಮಲೆನಾಡು ಪ್ರದೇಶದಲ್ಲಿ ಮಲೆನಾಡು ಗಿಡ್ಡ ಜಾತಿಯ ಸಂತತಿ ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿ. ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಾರಕ ರೋಗಗಳಿಂದ ರೈತರಿಗೆ ನಷ್ಟವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಜಾನುವಾರು ವಿಮೆ ಬಹಳ ಉಪಯುಕ್ತವಾಗಿದೆ ಎಂದು ತಿಳಿಸಿದರು. ರೈತರು ದೃತಿಗೆಡದೆ ಧೈರ್ಯದಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಕರೆ ನೀಡಿದರು.
ಹೊಸನಗರ ತಾಲೂಕು ಪಶುಪಾಲನಾ ಇಲಾಖೆಯ ಪ್ರಭಾರ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸಿ.ವಿ. ಸಂತೋಷಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೈನುಗಾರಿಕೆ ವೃತ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು. 2030ರೊಳಗೆ ಭಾರತವನ್ನು ರೇಬಿಸ್ ಮುಕ್ತ ರಾಷ್ಟ್ರವಾಗಿಸುವ ಗುರಿಯೊಂದಿಗೆ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಶಿಬಿರದಲ್ಲಿ ತಜ್ಞ ಪಶುವೈದ್ಯರಾದ ಡಾ. ಫಣಿರಾಜ್, ಡಾ. ಧನಂಜಯ, ಡಾ. ಮನೋಜ್, ಡಾ. ದಯಾನಂದ್, ಡಾ. ಸಿದ್ದೇಶ್, ಡಾ. ವಿನಯಕುಮಾರ್, ಡಾ. ನಿರಂಜನಮೂರ್ತಿ ಸೇರಿದಂತೆ ಗುತ್ತಿಗೆ ಪಶುವೈದ್ಯರಾದ ಡಾ. ಅರ್ಚನ, ಡಾ. ಲಾವಣ್ಯ ಹಾಗೂ ಸಿಬ್ಬಂದಿಗಳಾದ ಧನಂಜಯ,ಲಿಂಗರಾಜ್,ರಂಗಪ್ಪ,ರಮೇಶ,ನಾಗೇಂದ್ರ,ಕೇಶವ,ಶೃತಿ,ಕೇಶವಕುಮಾರ್,ಸ೦ತೋಷ, ಪಶುಗಳ ತಪಾಸಣೆ ಮತ್ತು ಚಿಕಿತ್ಸೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅರಣಕಟ್ಟೆ, ಪಲ್ಲವಿ ನಾಗರಾಜ್, ಗಾಮನಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.















Leave a Reply