ಕಾಲೇಜಿಗೆ ಸಭಾ ಭವನ, ಬಸ್ ನಿಲ್ದಾಣ ನಿರ್ಮಾಣ ಶಾಸಕರ ಭರವಸೆ
ರಿಪ್ಪನ್ ಪೇಟೆ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ 2025-26 ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ನಡೆಯಿತು.
ಶಾಸಕ ಬೇಳೂರು ಶ್ರೀ ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪಟ್ಟಣದ ಅಭಿವೃದ್ಧಿಗೆ ಈ ತನಕ ಯಾರು ನೀಡದಷ್ಟು ಅನುದಾನವನ್ನು ನಾವು ತಂದಿದ್ದೆವೆ. ಸ.ಪ.ಪೂ ಕಾಲೇಜಿಗೆ ಮುಂದೆ ಸಭಾ ಭವನ ನಿರ್ಮಾಣದ ಚಿಂತನೆಯೂ ಇದೆ ಎಂದು ತಮ್ಮ ಅಭಿವೃದ್ಧಿ ಕಾರ್ಯ ಚಟುವಟಿಕೆಯನ್ನು ವಿದ್ಯಾರ್ಥಿಗಳ ಮುಂದಿಟ್ಟರು. ನಮ್ಮ ಕಾಲದಲ್ಲಿ ನಾವು ಅನೇಕ ಕಾಡು ಹಣ್ಣುಗಳನ್ನು ತಿಂದು ಆನಂದಿಸುತ್ತಿದ್ದೆವು ಆದರೆ ನಿಮಗೆ ಪಾನಿಪುರಿ,ಪೀಜಾ ,ಬರ್ಗರ್ ಗಳು ಸಿಕ್ಕಿದೆ, ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ ಎಂದರು. ನಂತರ ನಡೆಯುವ ಮನರಂಜನಾ ಕಾರ್ಯಕ್ರಮದಲ್ಲಿ ಖುಷಿ ಯಿಂದ ಭಾಗವಹಿಸಿ ಜೊತೆಗೆ ತಂದೆ- ತಾಯಿ ಗುರುಗಳಿಗೆ ಗೌರವ ನೀಡಿ ಎಂದು ಕಿವಿಮಾತು ಹೇಳಿದರು. ಈ ಬಾರಿಯೂ ಅತ್ಯುತ್ತಮ ಫಲಿತಾಂಶ ಭರವಸೆಯಲ್ಲಿ ನಾವೆಲ್ಲ ಇದ್ದೇವೆ ಎಂದರು.
ಅಧ್ಯಕ್ಷತೆಯನ್ನು ಶ್ರೀ ಕೃಷ್ಣಮೂರ್ತಿ ಪ್ರಾಚಾರ್ಯರು ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಚಂದ್ರಪ್ಪ ಗುಂಡುಪಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಮತ್ತು ಶ್ರೀ ಗೋಪಾಲಕೃಷ್ಣ ಜಿ.ಆರ್,ಸಿ.ಡಿ.ಸಿ. ಉಪಾಧ್ಯಕ್ಷರು,ಪತ್ರಕರ್ತ ರಫಿ ರಿಪ್ಪನ್ ಪೇಟೆ, ಸಿ.ಡಿ.ಸಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಡುವೆ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಗೊಂಡಿತು. ಕಾಲೇಜಿನ ಲ್ಯಾಬಿಗೆ ಹತ್ತು ಕಂಪ್ಯೂಟರ್ಗಳನ್ನ ನೀಡುವಂತಹ ಭರವಸೆಯನ್ನು ಶಾಸಕರು ನೀಡಿದರು. ಶೈಕ್ಷಣಿಕ ಸಾಧನೆಯನ್ನು ಮಾಡಿರುವಂತಹ ಕಲಾ, ವಾಣಿಜ್ಯ, ವಿಜ್ಞಾನ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿ ಗೌರವಿಸಲಾಯಿತು.

ಗ್ರಾ.ಪಂ ಸದಸ್ಯ ನಿರೂಪ್, ಆಸೀಫ್, ಶ್ರೀಮತಿ ಮಹಾಲಕ್ಷ್ಮಿ ಅಣ್ಣಪ್ಪ, ಶ್ರೀಮತಿ ಅಶ್ವಿನಿ ರವಿಶಂಕರ್,ದೇವೇಂದ್ರಪ್ಪ ಗೌಡರು,ಉಪನ್ಯಾಸಕಿ ಶ್ರೀಮತಿ ಗೋಪಮ್ಮ,ರಾಜೇಶ್ ಬೋಳಾರ್, ಜನಾರ್ಧನ ನಾಯ್ಕ, ಸೆಬಾಸ್ಟಿನ್ ಮ್ಯಾಥ್ಯೂಸ್, ಸುಬ್ರಹ್ಮಣ್ಯ ಕೆ.ಎನ್ ಮತ್ತು ಸುಜಯಾ ನಾಡಿಗ್, ಅಂಬಿಕಾ ಎಂ.ಆರ್, ಶಾಸಕರ ಆಪ್ತ ಶ್ರೀನಿವಾಸ್ ಆಚಾರ್, ಕೆರೆಹಳ್ಳಿ ರವೀಂದ್ರ, ಶ್ರೀಧರ,ಸಣಕ್ಕಿ ಮಂಜು ಮತ್ತಿತರರಿದ್ದರು.















Leave a Reply