ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಂದ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
ರಿಪ್ಪನ್ ಪೇಟೆ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ 2025-26 ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವು ಡಿ.27 ರಂದು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಸನ್ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು ಅವರು ನಡೆಸಿಕೊಳ್ಳಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಚಂದ್ರಪ್ಪ ಗುಂಡುಪಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು,
ಶ್ರೀಮತಿ ಧನಲಕ್ಷ್ಮಿ ಗಂಗಾಧರ್, ಅಧ್ಯಕ್ಷರು,ಗ್ರಾಮ ಪಂಚಾಯತಿ,
ಮತ್ತು ಶ್ರೀ ಗೋಪಾಲಕೃಷ್ಣ ಜಿ.ಆರ್, ಉಪಾಧ್ಯಕ್ಷರು, ಶಾಲಾ ಅಭಿವೃದ್ಧಿ ಸಮಿತಿ ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.
ಉಪಸ್ಥಿತಿ ಶ್ರೀ ಸುಧೀಂದ್ರ ಪೂಜಾರಿ,ಉಪಾಧ್ಯಕ್ಷರು,ಗ್ರಾ.ಪಂ,
ಶ್ರೀ ಮಹಮ್ಮದ್ ರಫಿ,ಸದಸ್ಯರು, ಕಾ.ಅ.ಸ ,ಶ್ರೀ ಕಟ್ಟೆ ನಾಗಪ್ಪ,ಸದಸ್ಯರು, ಕಾ.ಅ.ಸ ,ಶ್ರೀಮತಿ ಲೇಖನ ಚಂದ್ರನಾಯ್ಕ,ಸದಸ್ಯರು, ಕಾ.ಅ.ಸ,ಶ್ರೀ ಬೋರಪ್ಪ,ಸದಸ್ಯರು, ಕಾ.ಅ.ಸ,ಶ್ರೀಮತಿ ಲಲಿತ ರಾಜೇಶ್,ಸದಸ್ಯರು, ಕಾ.ಅ.ಸ ,ಶ್ರೀ ಷಣ್ಮುಖ, ಸದಸ್ಯರು, ಕಾ.ಅ.ಸ
ಮತ್ತು ಸರ್ವ ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರೀ ಕೃಷ್ಣಮೂರ್ತಿ ,ಪ್ರಾಚಾರ್ಯರು,ಸ.ಪ.ಪೂ ಕಾಲೇಜು,ರಿಪ್ಪನ್ ಪೇಟೆ ಇವರು ವಹಿಸಲಿದ್ದಾರೆ.
ಕಾರ್ಯಕ್ರಮದ ನಡುವೆ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಗೊಳ್ಳಲಿದೆ.ಭಾಷಣ,ವಾರ್ಷಿಕ ವರದಿ, ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ , ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಮನರಂಜನಾ ಕಾರ್ಯಕ್ರಮ ಇರಲಿದೆ.
ವಿವಿಧ ವೇದಿಕೆಗಳ ಪದಾಧಿಕಾರಿಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಉಪನ್ಯಾಸಕಿ& ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಗೋಪಮ್ಮ, ಸಹ ಕಾರ್ಯದರ್ಶಿ ರಾಜೇಶ್ ಬೋಳಾರ್,ಚುನಾವಣಾ ಸಾಕ್ಷರತಾ ಸಂಘದ ನೋಡಲ್ ಅಧಿಕಾರಿ ಜನಾರ್ಧನ ನಾಯ್ಕ, ಕ್ರೀಡಾ ಕಾರ್ಯದರ್ಶಿ, ಸುಬ್ರಹ್ಮಣ್ಯ ಕೆ.ಎನ್ ಮತ್ತು ಸುಜಯ್ ನಾಡಿಗ್,
ಕ್ರೀಡಾ ಸಹಕಾರ್ಯದರ್ಶಿ ಶ್ರೀಮತಿ ಅಂಬಿಕಾ ಎಂ.ಆರ್ ಅವರು ಕಾರ್ಯಕ್ರಮದ ಚೆಂದಗಾಣಿಸಲು ಸಜ್ಜಾಗಿದ್ದಾರೆ.
ಎಲ್ಲಾ ಸಾರ್ವಜನಿಕರು, ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮ ಪಾಲ್ಗೊಂಡು ಚೆಂದಗಾಣಿಸಬೇಕೆಂದು ಶಾಲಾ ಸಮಿತಿಯ ವತಿಯಿಂದ ವಿನಂತಿಸಲಾಗಿದೆ.















Leave a Reply