ಕೆಂಚನಾಲ ಗ್ರಾಮಸ್ಥರ ಸಮಸ್ಯೆ ಬಗೆಹರಿಸಿದ ಶಾಸಕ ಬೇಳೂರು
ರಿಪ್ಪನ್ ಪೇಟೆ: ಪ್ರಸಿದ್ಧ ನಾಗರಹಳ್ಳಿ ಜಾತ್ರೋತ್ಸವದಲ್ಲಿ ಭಾಗಿಯಾದ ಮಾನ್ಯ ಶಾಸಕರು ಶ್ರೀದೇವರ ದರ್ಶನ ಪಡೆದು ಸಮಿತಿಯ ಸತೀಶ್, ವರ್ತೇಶ್ ಗೌಡರಿಂದ ಸನ್ಮಾನ ಸ್ವೀಕರಿಸಿ ಮುನ್ನೆಡೆದರು.
ಕೆಂಚನಾಲ ಗ್ರಾಮದ ಮಾರಿಕಾಂಬ ದೇವಸ್ಥಾನದ ಬಳಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ವ್ರತ ವ್ಯವಸ್ಥಾಪನಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹ ವ್ಯವಸ್ಥೆಯೊಂದಿಗೆ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಮತ್ತು ಒಕ್ಕೂಟದ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತದ ನಂತರ ಕೆಂಚನಾಲ ಗ್ರಾಮದಲ್ಲಿ ಪಾದಚಾರಿಗಳಿಗೆ ರೇಲ್ವೆ ಹಳಿ ದಾಟಲು ,ಗುತ್ತಿಗೆದಾರ ತಡೆಗೊಡೆ ನಿರ್ಮಿಸುತ್ತಿರುವುದರಿಂದ ಓಡಾಟಕ್ಕೆ ತೊಂದರೆ ಉಂಟಾಗಿದೆ, ಸುಮಾರು 500 ಮೀಟರ್ ಸುತ್ತಿ ಬರಬೇಕಾದ ಪರಿಸ್ಥಿತಿ ಇರುವುದರಿಂದ ಸಮಸ್ಯೆ ಉಲ್ಬಣಿಸಿದೆ ಎಂದು ಗ್ರಾಮಸ್ಥರು ಶಾಸಕರ ಬಳಿ ಕೇಳಿಕೊಂಡಾಗ,ಗುತ್ತಿಗೆದಾರನ ಬಳಿ ಮಾತನಾಡಿ ಅದನ್ನು ಪರಿಹರಿಸಿದರು.















Leave a Reply