3 ವರ್ಷ ಜೈಲು ಶಿಕ್ಷೆ!!!
ರಾಯ್ಪುರ: ಯುವತಿಯ ಕೈ ಹಿಡಿದು ಎಳೆದು ‘ಐ ಲವ್ ಯೂ’
ಎಂದಿದ್ದು ಆಕೆಯ ನಮ್ರತೆಯನ್ನು ಕೆರಳಿಸುತ್ತದೆ ಎಂದಿರುವ ನ್ಯಾಯಾಲಯ ಅದನ್ನು ಅಪರಾಧ ಎಂದೂ ಹೇಳಿದೆ. ಛತ್ತೀಸ್ ಗಢ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.ಶಾಲೆಯಿಂದ ಬರುತ್ತಿದ್ದ ಹುಡುಗಿಗೆ ‘ಐ ಲವ್ ಯೂ’ ಎಂದ ಪ್ರಕರಣದಲ್ಲಿ 3 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ನರೇಶ್ ಕುಮಾರ್ ಚಂದ್ರವಂಶಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಈ ಪ್ರಕರಣದಲ್ಲಿ ಯುವಕ ಯುವತಿಯ ಕೈಹಿಡಿದುಕೊಂಡಿದ್ದಲ್ಲದೇ ಆಕೆಯನ್ನು ತನ್ನತ್ತ ಸೆಳೆದು ಐ ಲವ್ ಯೂ ಎಂದಿದ್ದ.
ಯಾವುದೇ ಯುವಕ ಯಾವುದೇ ಯುವತಿಗೆ ಅದೂ ಗ್ರಾಮೀಣ ಪ್ರದೇಶದಲ್ಲಿ ಇಂಥ ವರ್ತನೆ ತೋರುವುದು ಅತ್ಯಂತ ಆಕ್ಷೇಪಾರ್ಹ’ ಎಂದಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿರುವ ನ್ಯಾ.ಚಂದ್ರವಂಶಿ, ಘಟನೆ ವೇಳೆ ಯುವಕ 19 ವರ್ಷದವನಾಗಿದ್ದ ಎಂಬ ಕಾರಣಕ್ಕೆ ಶಿಕ್ಷೆ ಪ್ರಮಾಣವನ್ನು 3ರಿಂದ 1 ವರ್ಷಕ್ಕೆ ಇಳಿಸಿದ್ದಾರೆ. ಅಲ್ಲದೆ, ಆತ ಜಾಮೀನಿನ ಮೇಲೆ ಹೊರಗಿರುವುದರಿಂದ ಸಂಬಂಧಿತ ನ್ಯಾಯಾಲಯಕ್ಕೆ ಶರಣಾಗಿ ಉಳಿದ ಶಿಕ್ಷೆ ಅನುಭವಿಸುವಂತೆ ಸೂಚಿಸಿದ್ದಾರೆ.












Leave a Reply