ರಿಪ್ಪನ್ ಪೇಟೆ: ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದುಗಳ ಮೇಲಿನ ಕ್ರೂರ ಹತ್ಯಾಕಾಂಡ, ದೌರ್ಜನ್ಯ ಹಾಗೂ ನರಮೇಧದ ವಿರುದ್ಧ ಆಕ್ರೋಶ ಭುಗಿಲೆದ್ದು, ಹಿಂದು ಜಾಗರಣ ವೇದಿಕೆ, ವಿನಾಯಕಪೇಟೆ ಘಟಕದ ನೇತೃತ್ವದಲ್ಲಿ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಳೆದ ಎರಡು ವರ್ಷಗಳಿಂದ ಹಿಂದು ಸಮುದಾಯದ ಮೇಲೆ ನಡೆಯುತ್ತಿರುವ ಅಮಾನವೀಯ ದಾಳಿಗಳನ್ನು ತೀವ್ರವಾಗಿ ಖಂಡಿಸಿ, ಬಾಂಗ್ಲಾದೇಶದ ಹಿಂದುಗಳಿಗೆ ತಕ್ಷಣ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ನಡೆದ ದೀಪು ದಾಸ್ ಅವರ ಹತ್ಯೆ ,ಹಿಂದುಗಳ ಮೇಲೆ ನಡೆಯುತ್ತಿರುವ ದಮನದ ಮತ್ತೊಂದು ಭೀಕರ ಉದಾಹರಣೆ ಎಂದು ಕಿಡಿಕಾರಿದ ಪ್ರತಿಭಟನಾಕಾರರು, ಬಾಂಗ್ಲಾದೇಶ ಸರ್ಕಾರದ ಮೌನ ಹಾಗೂ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು. ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ, “ಹಿಂದುಗಳ ಮೇಲೆ ದಾಳಿ ನಿಲ್ಲಿಸಿ” ಎಂಬ ಘೋಷಣೆಗಳೊಂದಿಗೆ ರಿಪ್ಪನ್ ಪೇಟೆಯಾದ್ಯಂತ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿಂಜಾವೇಯ ಜಿಲ್ಲಾ ಸಹ ಸಂಚಾಲಕ ಸಂಜಯ್, ಜಿಲ್ಲಾ ಪ್ರಮುಖರಾದ ಕುಷನ್ ದೇವರಾಜ್, ಮಂಜುನಾಥ್ ಆಚಾರ್, ಆರ್.ಟಿ ಗೋಪಾಲ್,ಸತೀಶ್ ಎನ್,ಲೋಹಿತ್ ಆಚಾರ್, ಫ್ಯಾನ್ಸಿ ರಮೇಶ್, ವಿ.ಹಿಂ.ಪ ಆಟೋ ರಾಘು, ಗುರುರಾಜ್, ಸಂತೋಷ್,ಮುಗುಡ್ತಿ ಅಭಿಷೇಕ, ನಾಗಾರ್ಜುನ್ ಸ್ವಾಮಿ, ಸುಧೀಂದ್ರ ಪೂಜಾರಿ,ಗಣೇಶ್, ಶ್ರೀನಿವಾಸ ಆಚಾರ್, ಹೇಮರಾಜ್ ಎಲೆಕ್ಟ್ರಿಕ್,ಭಾಸ್ಕರ್ ಶೆಟ್ಟಿ, ಶೇಖರ್,ತ ಮ ನರಸಿಂಹ,ಮಲ್ಲಿಕಾರ್ಜುನ್ ಜಿ.ಡಿ,ನಾಗೇಶ್ ರಾವ್, ರೇಖಾ ರವಿ,ನಾಗರತ್ನ ದೇವರಾಜ್, ಪದ್ಮ ಸುರೇಶ್ ಮತ್ತು ಅನೇಕ ಹಿಂದೂಪರ ಸಂಘಟನೆ ಕಾರ್ಯಕರ್ತರಿದ್ದರು.















Leave a Reply