
ತೇಜಸ್ ಪ್ರಕಲ್ಪ’ ತೇಜಸ್ ಟ್ರಸ್ಟ್‌ನ ಆಶ್ರಯದಲ್ಲಿ 2015ರಲ್ಲಿ ಆರಂಭಗೊಂಡಿದ್ದು, ಐ.ಎ.ಎಸ್., ಐ.ಪಿ.ಎಸ್. ಮುಂತಾದ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಿರುವ ತರಬೇತಿಯನ್ನು ಈ ಪ್ರಕಲ್ಪದ ಮೂಲಕ ನೀಡಲಾಗುತ್ತಿದೆ.

ಭಾರತವನ್ನು ಸಮರ್ಥ ಮತ್ತು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಭ್ರಷ್ಟಾಚಾರರಹಿತ ಸೇವೆ ಮಾಡುವ ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಅಗತ್ಯ ನಮ್ಮ ದೇಶದ್ದಿದೆ. ಈ ನಿಟ್ಟಿನಲ್ಲಿ ನಾಗರಿಕ ಸೇವೆಗಳಿಗೆ ಸೇರಬಯಸುವ ಪ್ರತಿಭಾವಂತ ಆದರೆ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ಪದವಿಪೂರ್ವ ಮಟ್ಟದಿಂದ ಉಚಿತ ತರಬೇತಿಯನ್ನು ನೀಡುವ ವಿಶೇಷವಾದ ಕಲ್ಪನೆಯನ್ನು ‘ತೇಜಸ್’ ಹೊಂದಿದೆ. ಆಧುನಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ನೀಡುತ್ತಾ, ಸಮಾಜದ ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುವ ಆಶಯ ‘ತೇಜಸ್’ನದು. ಇಂತಹ ನಿಷ್ಠಾವಂತ ಅಧಿಕಾರಿಗಳು ಭಾರತ ಸರ್ಕಾರದ ಕಾರ್ಯಾಂಗದಲ್ಲಿದ್ದರೆ ನಮ್ಮ ದೇಶದಲ್ಲಿ ಉತ್ತಮ ಆಡಳಿತವಿರಲು ಹಾಗೂ ದೇಶ, ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯವಾಗುತ್ತದೆ. ಪ್ರಥಮ ಪಿಯುಸಿ ಯಿಂದ ಅಂತಿಮ ವರ್ಷದ ಪದವಿಯ ತನಕ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಐದು ತಂಡವು ‘ತೇಜಸ್’ನಲ್ಲಿ ಪ್ರಸ್ತುತ ತರಬೇತಿಯನ್ನು ಪಡೆಯುತ್ತಿದೆ. ನಿವೃತ್ತ ಐ.ಎ.ಎಸ್. ಅಧಿಕಾರಿಗಳು, ನುರಿತ ಪ್ರಾಧ್ಯಾಪಕರು, ತರಬೇತುದಾರರು, ವಿಶೇಷ ಸಂಪನ್ಮೂಲ ವ್ಯಕ್ತಿಗಳು ‘ತೇಜಸ್’ನಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ File ಡೌನ್‌ಲೋಡ್ ಮಾಡಿ.
ಪರೀಕ್ಷಾ ಮಾಹಿತಿ
1.ಲಿಖಿತ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿಧಾನ- https://forms.gle/GvkRPyuaEfrHh5zQ9 ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
2.ಪ್ರವೇಶ ಪರೀಕ್ಷೆ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ-5
3.ಲಿಖಿತ ಪರೀಕ್ಷೆ ನಡೆಯುವ ದಿನಾಂಕ ಜನವರಿ -11
4.ಹೊಸನಗರ ತಾಲೂಕಿನ ಪರೀಕ್ಷಾ ಕೇಂದ್ರ- ಶ್ರೀ ಗುರೂಜಿ ಇಂಟರನ್ಯಾಷನ್ ಸ್ಕೂಲ್ ,ಹೊಸನಗರ






Leave a Reply