ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಡಿ.23ರಂದು ವಿವಿಧ  ಧಾರ್ಮಿಕ ಕಾರ್ಯಕ್ರಮಗಳು

Spread the love

add a heading 20251222 130844 00006835582522821336223 ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಡಿ.23ರಂದು ವಿವಿಧ  ಧಾರ್ಮಿಕ ಕಾರ್ಯಕ್ರಮಗಳು

ರಿಪ್ಪನ್ ಪೇಟೆ: ಪಟ್ಟಣದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಡಿಸೆಂಬರ್ 23ರಂದು ಮಂಗಳವಾರ  ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಲಿವೆ.
ಬೆಳಿಗ್ಗೆ 10.00 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಕಲಾಹೋಮ ನೆರವೇರಿಸಲ್ಪಡಲಿದೆ. ನಂತರ ಶ್ರೀ ಸಿದ್ಧಿವಿನಾಯಕ ದೇವರು ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಮಹಾಮಂಗಳಾರತಿ ನೆರವೇರಿಸಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.


   ಅದೇ ದಿನ ಸಂಜೆ 6.00 ಗಂಟೆಯಿಂದ ರಂಗೋತ್ಸವ, ಪ್ರಾಕಾರೋತ್ಸವ, ಉಯ್ಯಾಲೋತ್ಸವ, ಅಷ್ಟಾವದಾನ ಸೇವೆ, ನಂತರ ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿವೆ.


    ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆರ್. ಇ. ಈಶ್ವರ ಶೆಟ್ಟಿ ಅವರು ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *