ರಿಪ್ಪನ್ ಪೇಟೆ: ನಾಡಿ ನ್ಯೂಸ್ ಇಂದು ಅರಸಾಳು ಗ್ರಾಮ ಪಂಚಾಯತಿಯ ವೇಲಾಯುಧನ್ ಅವರ ಮನೆಯ ಮೂಲಸೌಕರ್ಯದ ಕುರಿತು ಬಿತ್ತರಿಸಿದ ವರದಿಗೆ ತಕ್ಷಣ ಸ್ಪಂದಿಸಿದ ಸಂಸದ ಬಿ.ವೈ ರಾಘವೇಂದ್ರ.b

ನಾಡಿ ನ್ಯೂಸ್ ಪ್ರಕಟಿಸಿದ ವರದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಸ್ಪಂದಿಸಿದ್ದು, ಸಂಬಂಧಿಸಿದ ಸಮಸ್ಯೆಯ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಪಡೆದ ಸಂಸದರು ಆ ಕುಟುಂಬಕ್ಕೆ ನೀರು,ಮನೆ,ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೆನೆ ಎಂದು ಭರವಸೆ ನೀಡಿದಷ್ಟೇ ಅಲ್ಲದೇ ನಮ್ಮ ಕಛೇರಿಯಿಂದ ಪ್ರಗತಿಯ ಕುರಿತು ಗಮನಿಸುತ್ತೆವೆ ಎಂದು ನಾಡಿ ನ್ಯೂಸ್ ನೊಂದಿಗೆ ಮಾತನಾಡಿದರು. ಜನಸಾಮಾನ್ಯರ ಸಮಸ್ಯೆಗಳನ್ನು ಮಾಧ್ಯಮದ ಮೂಲಕ ಮುಂದಿಟ್ಟ ನಾಡಿ ನ್ಯೂಸ್ ಕಾರ್ಯವನ್ನು ಅವರು ಮೆಚ್ಚಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಂಸದರು ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿದನ್ನ ಸ್ವಾಗತಿಸಿದ ಗ್ರಾಮಸ್ಥರು, ಆ ಕುಟುಂಬಕ್ಕೆ ಮೂಲಸೌಕರ್ಯ ಸಿಗುವಂತಾಗಲಿ ಎಂದು ಆಗ್ರಹಿಸಿದ್ದಾರೆ.














Leave a Reply