ಬಿಳಕಿ: ಪ್ರಥಮ ವರ್ಷದ ಹಗ್ಗ ಜಗ್ಗಾಟ ಪಂದ್ಯಾವಳಿ ನಾಳೆ
ಶ್ರೀ ಸಿದ್ದೇಶ್ವರ ಗೆಳೆಯರ ಬಳಗ, ಬಿಳಕಿ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಹಗ್ಗ ಜಗ್ಗಾಟ ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿಯಲ್ಲಿ ಹೊಸನಗರ–ಸಾಗರ ತಾಲೂಕಿನ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸ್ಥಳೀಯ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.
ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಆಯೋಜಕರಿಂದ ಆಕರ್ಷಕ ನಗದು ಬಹುಮಾನಗಳು ನೀಡಲಾಗುತ್ತದೆ.
ಬಹುಮಾನ ವಿವರ:
▪️ ಪ್ರಥಮ ಬಹುಮಾನ – ₹10,000/-
▪️ ದ್ವಿತೀಯ ಬಹುಮಾನ – ₹6,000/-
▪️ ತೃತೀಯ ಬಹುಮಾನ – ₹4,000/- ಹಾಗೂ ಆಕರ್ಷಕ ಪಾರಿತೋಷಕ

ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ














Leave a Reply