ಶಿಕಾರಿಪುರ: ತಾಲೂಕು ಕಚೇರಿಯಲ್ಲಿ ನಿಸರ್ಗ ಮಿತ್ರ ವಾರಪತ್ರಿಕೆಯ ದಿನದರ್ಶಿ ಕ್ಯಾಲೆಂಡರ್‌ನ್ನು ತಹಸೀಲ್ದಾರ್ ಶ್ರೀಮತಿ ಮಂಜುಳಾ ಭಜಂತ್ರಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಡಿಯಾರವು ಸಮಯ ತಿಳಿಸುವಂತೆ ಕ್ಯಾಲೆಂಡರ್ ದಿನನಿತ್ಯದ ಬದುಕಿಗೆ ಅಗತ್ಯವಾದ ದಿನಾಂಕ, ವಾರ, ಹಬ್ಬ–ಹರಿದಿನಗಳು ಹಾಗೂ ಸರ್ಕಾರಿ ರಜೆಗಳ ಮಾಹಿತಿಯನ್ನು ನೀಡುವ ಮಹತ್ವದ ಸಾಧನವಾಗಿದೆ ಎಂದು ಹೇಳಿದರು.
ನಿತ್ಯ ಜೀವನದ ಕಾರ್ಯಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ಯೋಜಿಸಲು ದಿನದರ್ಶಿ ಕ್ಯಾಲೆಂಡರ್ ಅವಿಭಾಜ್ಯವಾಗಿದ್ದು, ಸಾರ್ವಜನಿಕರಿಗೆ ದಿನಾಂಕಗಳ ಸ್ಪಷ್ಟ ಅರಿವು ಮೂಡಿಸುವಲ್ಲಿ ಇಂತಹ ಪ್ರಯತ್ನಗಳು ಸಹಕಾರಿಯಾಗುತ್ತವೆ ಎಂದರು. ಸಾಮಾಜಿಕ ಕಳಕಳಿಯೊಂದಿಗೆ ಎನ್ ಆರ್ ವೆಂಕಟೇಶ್ ಸಾರಥ್ಯದ ನಿಸರ್ಗ ಮಿತ್ರ ವಾರಪತ್ರಿಕೆ ಬಿಡುಗಡೆಗೊಳಿಸಿರುವ ಈ ಕ್ಯಾಲೆಂಡರ್ ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಮಾರ್ಗದರ್ಶಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಹಾಗೂ ಮಾಧ್ಯಮ ಮಿತ್ರರಾದ ಜಿ.ಕೆ. ಹೆಬ್ಬಾರ್ ಉಪಸ್ಥಿತರಿದ್ದು, ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
















Leave a Reply