ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುನ್ನೆಲೆಗೆ ತಂದಿದ್ದು ಭಾರತ ಸಂವಿಧಾನ : ತಹಶೀಲ್ದಾರ್ ಭರತ್ ರಾಜ್

26hnr1photo.gana scaled ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುನ್ನೆಲೆಗೆ ತಂದಿದ್ದು ಭಾರತ ಸಂವಿಧಾನ : ತಹಶೀಲ್ದಾರ್ ಭರತ್ ರಾಜ್
Spread the love

ಹೊಸನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ ದೇಶಕ್ಕೆ ನಮ್ಮದೇ ಆಡಳಿತದಲ್ಲಿ ನಾವು ಈ ದೇಶದಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎನ್ನುವ ಶಪಥವನ್ನು ಇಡೀ ಭಾರತ  ಸಮಾಜವೇ ಎದ್ದು ನಿಂತು ಶಪಥ ಮಾಡುವ ಪವಿತ್ರವಾದ ದಿನ ಗಣರಾಜ್ಯೋತ್ಸವವಾಗಿದೆ ಎಂದು ಹೊಸನಗರದ ತಹಶೀಲ್ದಾರ್ ಭರತ್‌ರಾಜ್‌ರವರು ಹೇಳಿದರು.

  ಹೊಸನಗರದ ನೆಹರು ಮೈದಾನದಲ್ಲಿ 77ನೇ ಗಣ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು ರಾಷ್ಟ್ರದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕ ಸಂದೇಶ ನೀಡಿದರು.

ಭಾರತ ದೇಶಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡು ಅವರ ಬಾಳನ್ನು ರೂಪಿಸಲೆಂದು ಹಚ್ಚಿಟಿರುವ ಬೆಳ್ಳಿ ಹಣತೆ ಆಗಿದೆ ನಮ್ಮ ಸಂವಿದಾನ, ವಿಶ್ವ  ಭೂಪಟದಲ್ಲಿ ಹಲವು ಭಾಷೆ, ಪ್ರಾಂತ್ಯಗಳಿಂದ ಕೂಡಿರುವ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮ ಭಾರತ ಐಕ್ಯತೆ ಸಮಗ್ರತೆ ಕಾಪಡಿಕೊಳ್ಳುವ ಮೂಲಕ ಸದೃಡ ರಾಷ್ಟ್ರವಾಗಿ ನಮ್ಮ ದೇಶ ಬೆಳೆದು ನಿಂತಿದೆ ಸಮಾಜದ ಶ್ರೇಯೋಭಿವೃದ್ಧಿ ನಮ್ಮ ಸಂವಿಧಾನದ ಅಂತಿಮ ಆಶಯ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಮಾತನ್ನು ಅರಿತು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಿದ್ದೇವೆ ಅವರ ನುಡಿಗಳ ಆಶಯದಂತೆ ನಡೆದುಕೊಳ್ಳಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದೇವೆ ನಾವು ನಿವೇಲ್ಲರೂ ಅಭಿವೃದ್ಧಿಯೊಂದಿಗೆ ಭಾರತವನ್ನು ಸಶಕ್ತ ಸಧೃಡ ಪ್ರಜಾಪ್ರಭುತ್ವವಾಗಿ ರೂಪಿಸಲು ಶ್ರಮಿಸೋಣ ಗುರುದೇವ ರವೀಂದ್ರನಾಥ ಠಾಗೋರರು ಹೇಳಿದಂತೆ ಮೇಲು ಕೀಳು ಬಡವ ಬಲ್ಲಿಗನೆಂಬ ಭೇದ ಮರೆತು ಸಹಬಾಳ್ವೆಯ ರಾಷ್ಟ್ರ ನಿರ್ಮಾಣ ಮಾಡೋಣ ಸ್ನೇಹ, ಪ್ರೀತಿ ಸೋದರ ಭಾವದ ನೆಲೆ ನಮ್ಮ ಜೀವಾಳವಾಗಲಿ ಸಂವಿಧಾನದ ಪ್ರಸ್ತಾವನೆಯ ಆಶಯಗಳು ಇನ್ನಷ್ಟು ಸಾಕಾರವಾಗಲಿ ೭೭ನೇ ಗಣ ರಾಜ್ಯೋತ್ಸವದ ಈ ಸಂಭ್ರಮದಲ್ಲಿ ಹೊಸ ನಾಳೆಯ ನಿರ್ಮಾಣದ ನಮ್ಮ ಹಿರಿಯರು ಕಂಡ ಕನಸನ್ನು ಇನ್ನಷ್ಟು ಸಾಕಾರವಾಗಿಸುವ ಪಣ ತೊಡೋಣ ಎಂದರು.


77 ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದ  ವಿವಿಧ ಶಾಲೆಯ ಮಕ್ಕಳಿಂದ ಪಥ ಸಂಚಾಲನ, ಸಾಂಸ್ಕೃತೀಕ ಕರ‍್ಯಕ್ರಮಗಳನ್ನು ರ‍್ಪಡಿಸಲಾಗಿತ್ತು.ವಿವಿಧ ರೀತಿಯಲ್ಲಿ ತಾಲ್ಲೂಕಿಗೆ ಕೀರ್ತಿ ತಂದವರನ್ನು ಈ ಸಂದರ್ಭದಲ್ಲಿ  ಸನ್ಮಾನಿಸಲಾಯಿತು.


ಈ ಕಾರ್ಯಕ್ರಮ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಹೊಸನಗರ ಪೋಲೀಸ್ ವೃತ್ತ ನಿರೀಕ್ಷಕರಾದ ಗೌಡಪ್ಪ ಗೌಡರ್, ಎಸ್.ಐ ಶಂಕರ ಗೌಡ ಪಾಟೀಲ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್,  ಕ್ಷೇತ್ರಾ ಶಿಕ್ಷಣಾದಿಕಾರಿ ಗಣೇಶ್,  ನಾಡ ಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀನಿವಾಸ್ ಕಾಮತ್, ಶ್ರೀಧರ ಉಡುಪ,  ವರ್ತಕರ  ಸಂಘದ ನಿಕಟಪೂರ್ವ ಅಧ್ಯಕ್ಷರಾದ ವಿಜೇಂದ್ರ ಶೇಟ್, ತಾಲ್ಲೂಕು,  ಗ್ರೇಡ್ ೨ ತಹಶೀಲ್ದಾರ್ ರಾಕೇಶ್, ದೈಹಿಕ ಪರೀವಿಕ್ಷಕರಾದ ವಿನಯ್ ಹೆಗಡೆ ಕರ್ಕಿ, ಶಿಶು ಅಭಿವೃದ್ಧಿ ಅಧಿಕಾರಿ ಗಾಯಿತ್ರಿ ಕೆ.ಜಿ, ಪಿ ರಾಜು,  ಚಿರಾಗ್, ಚುನಾವಣೆ ಶಿರಾಸ್ಥೆದಾರ್ ಸತೀಶ್, ಸುದೀಂದ್ರಕುಮಾರ್, ದೈಹಿಕ ಶಿಕ್ಷಕ ಸಂಘದ ರಾಜುಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಲೋಹಿತ್, ಸಿದ್ದಪ್ಪ, ರಾಘವೇಂದ್ರ, ರೇಣುಕಯ್ಯ, ಮಹಮದ್ ರೈಸ್, ರಾಧಿಕ ರತ್ನಾಕರ್ ಶೆಟ್ಟಿ, ದನಂಜಯ, ರೇಣುಕೇಶ್, ಗಣೇಶ್, ಅಶೋಕ, ನಾಗಪ್ಪ,   ಸುಹಾಸ್, ತಾಲ್ಲೂಕು ಕಛೇರಿಯ ಎಲ್ಲ ನೌಕರರು , ತಾಲ್ಲೂಕು ಪಂಚಾಯಿತಿಯ ಎಲ್ಲ ನೌಕರ ರ‍್ಗ ವಿವಿಧ ಇಲಾಖೆಯ ರ‍್ಕಾರಿ ನೌಕರ ರ‍್ಗ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಸದಸ್ಯರುಗಳು ಹಾಗೂ ರ‍್ಕಾರಿ ಹಾಗೂ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ವೃಂದ ಹಾಗೂ ಎಲ್ಲ ಸರ್ಕಾರಿ ಶಾಲೆಯ,ಖಾಸಗಿ ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನೀಯರು ಆಗಮಿಸಿ ಕಾರ್ಯಕ್ರಮ ಮೆರಗು ನೀಡಿದರು.


Spread the love

Leave a Reply

Your email address will not be published. Required fields are marked *