ಶಿವಮೊಗ್ಗದ ಶೋರೂಮ್‌ಗೆ ಹೋದವ ನಾಪತ್ತೆ; ಸುಳಿವು ನೀಡಲು ಪೊಲೀಸರ ಮನವಿ

IMG 20260123 WA0004 ಶಿವಮೊಗ್ಗದ ಶೋರೂಮ್‌ಗೆ ಹೋದವ ನಾಪತ್ತೆ; ಸುಳಿವು ನೀಡಲು ಪೊಲೀಸರ ಮನವಿ
Spread the love

ಪೊಲೀಸ್ ಉಪನಿರೀಕ್ಷಕರು ರಿಪ್ಪನ್ ಪೇಟೆ9480803365

ರಿಪ್ಪನ್ ಪೇಟೆ :ಹೊಸನಗರ ತಾಲೂಕು ಹುಂಚಾ ಹೋಬಳಿ, ಹುಂಚಾ ಗ್ರಾಮದ ಮಾರ್ನಮಿ ಬೈಲು ನಿವಾಸಿ ಧನುಷ್ ಎನ್.ಡಿ (25) ಎಂಬ ಯುವಕ ಕಳೆದ 19-01-2026 ರಂದು ಬೆಳಿಗ್ಗೆ ಮನೆಯಿಂದ ಶಿವಮೊಗ್ಗದ ಮಹೇಂದ್ರ ಶೋರೂಮ್‌ಗೆ ತೆರಳುವುದಾಗಿ ಹೇಳಿ ಹೊರಟು ಹೋಗಿದ್ದು, ನಂತರ ಮನೆಗೂ ವಾಪಸ್ ಬಾರದೇ ಕಾಣೆಯಾಗಿರುವ ಘಟನೆ ನಡೆದಿದೆ.

img 20260123 wa00044275749358037355251 ಶಿವಮೊಗ್ಗದ ಶೋರೂಮ್‌ಗೆ ಹೋದವ ನಾಪತ್ತೆ; ಸುಳಿವು ನೀಡಲು ಪೊಲೀಸರ ಮನವಿ
ಧನುಷ್


ಧನುಷ್ ಶಿವಮೊಗ್ಗಕ್ಕೆ ತೆರಳಿದ ಬಳಿಕ ಕಾಣೆಯಾಗಿದ್ದು, ಸಂಬಂಧಿಕರು ಹಾಗೂ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಣೆಯಾದ ಯುವಕನ ತಂದೆ ದಿನೇಶ್ ಮರಗಿ ಬಿನ್ ನಾಗಪ್ಪ ಮರಗಿ ಅವರು ನೀಡಿದ ದೂರಿನ ಆಧಾರದಲ್ಲಿ ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 09/2026, ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ಯುವಕನ ಚಹರೆ ವಿವರ

ಹೆಸರು: ಧನುಷ್ ಎನ್.ಡಿ ಬಿನ್ ದಿನೇಶ್ ಮರಗಿ
ವಯಸ್ಸು: 25 ವರ್ಷ
ಎತ್ತರ: ಸುಮಾರು 5 ಅಡಿ 7 ಇಂಚು
ಮೈಬಣ್ಣ: ಎಣ್ಣೆಗಂಪು
ಮುಖ: ಕೋಲು ಮುಖ
ಮೈಕಟ್ಟು: ಸಾಧಾರಣ
ಭಾಷೆ: ಕನ್ನಡ
ಉದ್ಯೋಗ: ಟಿಕ್ನಿಷಿಯನ್

image editor output image1579928654 17691550943129052980718223228047 ಶಿವಮೊಗ್ಗದ ಶೋರೂಮ್‌ಗೆ ಹೋದವ ನಾಪತ್ತೆ; ಸುಳಿವು ನೀಡಲು ಪೊಲೀಸರ ಮನವಿ



ಸುಳಿವು ದೊರೆತಲ್ಲಿ ಸಂಪರ್ಕಿಸಿ,
ಕಾಣೆಯಾದ ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೆಳಕಂಡ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ:

  • ಪೊಲೀಸ್ ಉಪನಿರೀಕ್ಷಕರು, ರಿಪ್ಪನಪೇಟೆ ಪೊಲೀಸ್ ಠಾಣೆ, ಹೊಸನಗರ ತಾಲೂಕು
    9480803365
  • ಪೊಲೀಸ್ ನಿರೀಕ್ಷಕರು, ಹೊಸನಗರ ವೃತ್ತ, ತೀರ್ಥಹಳ್ಳಿ ಉಪವಿಭಾಗ, ಶಿವಮೊಗ್ಗ ಜಿಲ್ಲೆ
    9480803337
  • ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ, ಶಿವಮೊಗ್ಗ ಜಿಲ್ಲೆ
    9480803340


Spread the love

Leave a Reply

Your email address will not be published. Required fields are marked *