ತರಬೇತಿಯಲ್ಲಿ ಏನೆಲ್ಲ ಇರಲಿದೆ? ಎಷ್ಟು ಸೀಟು ಲಭ್ಯವಿದೆ? 👇
ಹೊಸನಗರ: ಕೃಷಿ ಇಲಾಖೆ ಹೊಸನಗರ ವತಿಯಿಂದ ಆತ್ಮ (ATMA) ಯೋಜನೆಯಡಿ ಗ್ರಾಮೀಣ ಯುವಕರಿಗಾಗಿ ಎರಡು ದಿನಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ತರಬೇತಿ ಶಿಬಿರವು ದಿನಾಂಕ 19 ಮತ್ತು 20 ಫೆಬ್ರವರಿ 2026 ರಂದು ಕೃಷಿ ವಿಶ್ವವಿದ್ಯಾಲಯ, ಇರುವಕ್ಕಿ, ಆನಂದಪುರದಲ್ಲಿ ನಡೆಯಲಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಪರ್ಯಾಯ ಆದಾಯ ಮಾರ್ಗಗಳ ಕುರಿತು ಯುವಕರಿಗೆ ಪ್ರಾಯೋಗಿಕ ಜ್ಞಾನ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಶಿಬಿರದಲ್ಲಿ ಕೆಳಗಿನ ವಿಷಯಗಳ ಕುರಿತು ತಜ್ಞರಿಂದ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನೀಡಲಾಗುತ್ತದೆ:
- ತರಕಾರಿ ಕೃಷಿ
- ಔಷಧೀಯ ಸಸ್ಯಗಳ ಕೃಷಿ ಮತ್ತು ಮಾರಾಟ
- ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಕೆ (ಪ್ರಾತ್ಯಕ್ಷಿಕೆ)
- ಜೇನು ಕೃಷಿ (ಪ್ರಾತ್ಯಕ್ಷಿಕೆ)
- ನರ್ಸರಿ ಗಿಡಗಳ ತಯಾರಿಕೆ (ಪ್ರಾತ್ಯಕ್ಷಿಕೆ)
- ಕಾರ್ಬನ್ ಕ್ರೆಡಿಟ್ ಮೂಲಕ ರೈತರಿಗೆ ಹೊಸ ಆದಾಯ ಸಾಧ್ಯತೆಗಳು
ಕೃಷಿಯಲ್ಲಿ ವೈವಿಧ್ಯತೆ ಹಾಗೂ ಮೌಲ್ಯವರ್ಧನೆ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗಗಳ ಬಗ್ಗೆ ವಿಶೇಷವಾಗಿ ಮಾರ್ಗದರ್ಶನ ನೀಡಲಾಗುತ್ತದೆ.ಮೊದಲ ಆಸಕ್ತ 50 ರೈತರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ತಮ್ಮ ಹೆಸರನ್ನು ಕಡ್ಡಾಯವಾಗಿ ಮುಂಗಡವಾಗಿ ನೋಂದಾಯಿಸಿಕೊಳ್ಳಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗೆ:
Syed – 7892461978
ಗ್ರಾಮೀಣ ಯುವಕರು ಮತ್ತು ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.












Leave a Reply