ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ

ರಿಪ್ಪನ್‌ಪೇಟೆ ಸಮೀಪದ ಮೂಗುಡ್ತಿಯಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಬಸ್‌ ಕೇವಲ 20 ಅಡಿ ದೂರದಲ್ಲಿದ್ದಾಗ ಭಾರೀ ದುರಂತ ತಪ್ಪಿದೆ. ವಿದ್ಯುತ್ ಕಂಬಗಳು ಮುರಿದು ಸಂಪರ್ಕ ಕಡಿತಗೊಂಡಿದ್ದು, ಅರಣ್ಯ ಇಲಾಖೆ ಹಾಗೂ ಮೇಸ್ಕಾಂ ಸಿಬ್ಬಂದಿ ತೆರವು ಮತ್ತು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.