ರಿಪ್ಪನ್ ಪೇಟೆ: ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣರ ಸಮಾಜ ಮಂದಿರದಲ್ಲಿ ಶರನ್ನವರಾತ್ರಿ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಶುಕ್ರವಾರ ನವ ಚಂಡಿಕಾ ಹವನ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಗುರುವಾರ ಸಂಜೆಯಿಂದಲೇ ಸಮಾಜ ಮಂದಿರದಲ್ಲಿ ದೇವತಾ ಪ್ರಾರ್ಥನೆ, ಭಜನೆ ಹಾಗೂ ಫಲಾಹಾರ ಕಾರ್ಯಕ್ರಮಗಳು ಜರುಗಿದವು. ಶುಕ್ರವಾರ ಬೆಳಗ್ಗೆಯಿಂದ ಶ್ರೀಗುರು ಗಣೇಶ ಪೂಜೆ, ಪುಣ್ಯಾಹ, ಕಲಶ ಪ್ರತಿಷ್ಠಾಪನೆ, ಹವನ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಸಂತರ್ಪಣೆ ನೆರವೇರಿದವು.
ವೇದಮೂರ್ತಿ ಗಂಗೊಳ್ಳಿ ಸುದರ್ಶನ ಆಚಾರ್ಯ, ಗಣೇಶ್ ಭಟ್ ಹಾಗೂ ಪ್ರಸನ್ನ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ಪೂರ್ಣಾಹುತಿಯ ಬಳಿಕ ಭಕ್ತಾದಿಗಳಿಗೆ ಹಿತೋಪದೇಶ ನೀಡಿದ ಗಣೇಶ್ ಭಟ್ ಅವರು ಮಾತನಾಡಿ, ಗೌಡ ಸಾರಸ್ವತ ಬ್ರಾಹ್ಮಣರು ಇಂದು ಸಮಾಜಮುಖಿಯಾಗಿ, ವಿದ್ಯಾವಂತರಾಗಿ ಹಾಗೂ ಉದ್ಯೋಗದಾತರಾಗಿ ಗುರುತಿಸಿಕೊಳ್ಳಲು ಶ್ರೀದೇವರ ಅನುಗ್ರಹವೇ ಕಾರಣ. ಕಾಲ ಬದಲಾದರೂ ನಮ್ಮ ಆಚಾರ-ವಿಚಾರಗಳನ್ನು ಬಿಡಬಾರದು. ಬ್ರಾಹ್ಮಣ್ಯವನ್ನು ಉಳಿಸಿಕೊಂಡು ಬೆಳೆಸುವ ಮೂಲಕ ನಮ್ಮ ಸಂಸ್ಕೃತಿಯನ್ನು ರಕ್ಷಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಅಧ್ಯಕ್ಷ ಗಣೇಶ್ ಕಾಮತ್, ಹರೀಶ್ ಪ್ರಭು, ಹರೀಶ್ ಸರಾಫ್, ರಾಮದಾಸ್ ಭಟ್, ಉಮೇಶ್ ಭಟ್, ದೀಪಕ್ ಭಗತ್, ರಮೇಶ್ ಶೆಣೈ, ಜೆ. ರಾಧಾಕೃಷ್ಣ, ಡಿ. ನರಸಿಂಹ ಕಾಮತ್, ರಾಜೇಶ್ ಪ್ರಭು, ಸತೀಶ್ ಕಿಣಿ, ವಿಘ್ನೇಶ್ ಪ್ರಭು, ಲಕ್ಷ್ಮಣ ಪೈ ಸೇರಿದಂತೆ ಸಮಾಜದ ಅನೇಕ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
















Leave a Reply