ವಿಶ್ವ ಪ್ರವಾಸೋದ್ಯಮ ದಿನಾಚರಣೆ
‘ಅತಿಶಯ ಶ್ರೀಕ್ಷೇತ್ರ ಹೊಂಬುಜ ಐತಿಹಾಸಿಕ ಹಾಗೂ ಧಾರ್ಮಿಕ ತಾಣ’
– ಹೊಂಬುಜ ಶ್ರೀಗಳು

Addaheading 20260928 182902 0000 ವಿಶ್ವ ಪ್ರವಾಸೋದ್ಯಮ ದಿನಾಚರಣೆ<br>‘ಅತಿಶಯ ಶ್ರೀಕ್ಷೇತ್ರ ಹೊಂಬುಜ ಐತಿಹಾಸಿಕ ಹಾಗೂ ಧಾರ್ಮಿಕ ತಾಣ’<br>- ಹೊಂಬುಜ ಶ್ರೀಗಳು
Spread the love

ರಿಪ್ಪನ್ ಪೇಟೆ : ಪ್ರವಾಸ ಕೈಗೊಳ್ಳುವ ಮನೋಭಾವದಿಂದ ಮಾನಸಿಕ ಶಾಂತಿ, ಬೌದ್ಧಿಕ ಅರಿವು ಹಾಗೂ ಇತಿಹಾಸ-ಸಂಸ್ಕೃತಿಯ ಪರಿಚಯವಾಗುತ್ತದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಂತೆಯೇ, ನಿಸರ್ಗ ರಮಣೀಯ ಪ್ರಕೃತಿ ತಾಣಗಳಿಗೂ ಪ್ರವಾಸ ಮಾಡುವ ಪರಿಪಾಠ ಜನರಲ್ಲಿ ಇಂದು ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಸ್ವಚ್ಛತೆಯ ಬಗ್ಗೆ ಜಾಗೃತಿ ಬೆಳೆಸಿಕೊಂಡು ನಮ್ಮ ದೇಶದ, ನಾಡಿನ ಧಾರ್ಮಿಕ, ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳನ್ನು ನಿರ್ಮಲವಾಗಿಡಬೇಕು. ಪ್ರವಾಸಿಗರಿಗೆ ಮತ್ತು ಯಾತ್ರಾರ್ಥಿಗಳಿಗೆ ಇವು ಆಕರ್ಷಣೀಯವಾಗಿರಬೇಕು ಎಂದರು. ಹಾಗೆಯೇ, ದೇಶದ ಪ್ರವಾಸೋದ್ಯಮ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಅನುದಾನಗಳು ಮತ್ತಷ್ಟು ಜನಹಿತಕಾರಿಯಾಗಿ ತಲುಪಲಿ ಎಂದು ಆಶಿಸಿದರು.

   ಶಿವಮೊಗ್ಗ ಜಿಲ್ಲೆಯು ಧಾರ್ಮಿಕ ಮತ್ತು ಪ್ರಾಕೃತಿಕವಾಗಿ ವಿಶ್ವಮಾನ್ಯ ತಾಣಗಳನ್ನು ಹೊಂದಿದೆ ಎಂದ ಶ್ರೀಗಳು, ಸುಮಾರು 1400 ವರ್ಷಗಳ ಇತಿಹಾಸವಿರುವ ಹೊಂಬುಜ ಶ್ರೀಕ್ಷೇತ್ರದಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಲಾಗುತ್ತಿದ್ದು, ಸಂಪೂರ್ಣ ಗಣಕೀಕೃತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕ್ಷೇತ್ರದ ಇತಿಹಾಸ ಮತ್ತು ಐತಿಹ್ಯವನ್ನು ಕೃತಕ ಬುದ್ಧಿಮತ್ತೆ ಮೂಲಕ ಮರುಸೃಷ್ಟಿಸಿ, ಅದರ ಆಕರ್ಷಕ ಚಿತ್ರಣವನ್ನು ಯಾತ್ರಿಕರಿಗೆ ಪರಿಚಯಿಸಲಾಗುವುದು ಎಂದು ಪ್ರಕಟಿಸಿದರು.
   ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಟಿ. ಧರ್ಮಪ್ಪ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯ ಪದಾಧಿಕಾರಿಗಳು ಹಾಗೂ ಪ್ರವಾಸಿಗರು ಉಪಸ್ಥಿತರಿದ್ದರು. ದೇವೇಂದ್ರರವರು ಸ್ವಾಗತಿಸಿ, ಶಾಲಿನಿ ಮೋಹನ್ ಪ್ರಾರ್ಥಿಸಿ ವಂದಿಸಿದರು.

file 000000003f5c8208a0b120fec3430d9d410738032103674428 ವಿಶ್ವ ಪ್ರವಾಸೋದ್ಯಮ ದಿನಾಚರಣೆ<br>‘ಅತಿಶಯ ಶ್ರೀಕ್ಷೇತ್ರ ಹೊಂಬುಜ ಐತಿಹಾಸಿಕ ಹಾಗೂ ಧಾರ್ಮಿಕ ತಾಣ’<br>- ಹೊಂಬುಜ ಶ್ರೀಗಳು

Leave a Reply

Your email address will not be published. Required fields are marked *

error: Content is protected !!