ಶೇರುದಾರರ ಸಹಕಾರವೇ ಸಂಸ್ಥೆಯ ಬೆಳವಣಿಗೆಯ ಶಕ್ತಿ:  ಗಣೇಶ್ ವೈ

Addaheading 20260920 201746 0000 ಶೇರುದಾರರ ಸಹಕಾರವೇ ಸಂಸ್ಥೆಯ ಬೆಳವಣಿಗೆಯ ಶಕ್ತಿ:  ಗಣೇಶ್ ವೈ
Spread the love

ಹೊಸನಗರ: ಯಾವುದೇ ಸಹಕಾರಿ ಸಂಸ್ಥೆಯ ಬೆಳವಣಿಗೆಗೆ ಶೇರುದಾರರ ಸದಸ್ಯರ ಸಹಕಾರ ಹಾಗೂ ಸಾಲದ ಸಮಯೋಚಿತ ಮರುಪಾವತಿಯೇ ಪ್ರಮುಖ ಆಧಾರ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಹೇಳಿದರು.
   ನಗರದ ಗಾಯತ್ರಿ ಮಂದಿರದಲ್ಲಿ ಶನಿವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
  ಸಂಸ್ಥೆಯಲ್ಲಿ ಶಿಸ್ತು, ಸಂಯಮ ಹಾಗೂ ನಿಯಮ ಪಾಲನೆ ಇದ್ದರೆ ಅದು ವರ್ಷದಿಂದ ವರ್ಷಕ್ಕೆ ಹೆಮ್ಮರವಾಗಿ ಬೆಳೆಯುತ್ತದೆ. ಶಿಕ್ಷಕರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡುತ್ತಿರುವುದರಿಂದ ಸಂಘ ಆರ್ಥಿಕವಾಗಿ ಸದೃಢವಾಗಿದ್ದು, ಸದಸ್ಯರಿಗೂ ಹೆಚ್ಚಿನ ಸೌಲಭ್ಯ ದೊರೆಯುತ್ತಿದೆ ಎಂದರು.
   ಸಂಘದ ಕಾರ್ಯದರ್ಶಿ ವೆಂಕಟೇಶ್ ಹೆಚ್ ವಾರ್ಷಿಕ ವರದಿ ಮಂಡಿಸಿ, 2025–26ನೇ ಸಾಲಿನಲ್ಲಿ ಸಂಘವು ₹6,29,869 ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದ ಶೇರು ಬಂಡವಾಳವು ವರ್ಷಾರಂಭದ ₹19,86,630ರಿಂದ ಹೆಚ್ಚಾಗಿ ಪ್ರಸ್ತುತ ₹20,50,530ಕ್ಕೆ ತಲುಪಿದ್ದು, ಈ ಸಾಲಿನಲ್ಲಿ ₹63,900 ಬಂಡವಾಳ ಹೆಚ್ಚಳವಾಗಿದೆ. ಎಲ್ಲ ಸದಸ್ಯರಿಗೆ ಶೇರು ಪ್ರಮಾಣಪತ್ರ ವಿತರಿಸಲಾಗಿದ್ದು, ಸದಸ್ಯರ ದಾಖಲೆಗಳನ್ನು ಸಹಕಾರಿ ಕಾಯ್ದೆಯಂತೆ ನಿರ್ವಹಿಸಲಾಗಿದೆ ಎಂದು ವಿವರಿಸಿದರು.  

ಸಂಘದ ಅಧ್ಯಕ್ಷ ಧರ್ಮಪ್ಪ ಡಿ ಮಾತನಾಡಿ, ಸಂಘದಲ್ಲಿ 394 ಸದಸ್ಯರು ಇದ್ದು, ಈವರೆಗೆ ₹3 ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸದಸ್ಯರಿಗೆ ₹10 ಲಕ್ಷವರೆಗೆ ಸಾಲ ನೀಡುವ ಹಾಗೂ ಮರುಪಾವತಿ ಅವಧಿಯನ್ನು 72 ತಿಂಗಳಿಗೆ ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ ಎಂದರು.
   ಸಂಘದ ಲೆಕ್ಕಪತ್ರ ಹಾಗೂ ದೈನಂದಿನ ವಹಿವಾಟುಗಳನ್ನು ಪಾರದರ್ಶಕಗೊಳಿಸಲು ಶಿವಮೊಗ್ಗದ ಸಿಲಿಕಾನ್ ಸಾಫ್ಟ್‌ವೇರ್ ಸಂಸ್ಥೆಯ ನೂತನ ತಂತ್ರಾಂಶ ಅಳವಡಿಸಲಾಗಿದೆ ಎಂದು ತಿಳಿಸಿದರು.
  ಸಭೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿ.ಪಿ., ಎಂ. ರಂಗನಾಥ್, ಶೇಷಾಚಲ ಜಿ. ನಾಯ್ಕ್, ವೆಂಕಟಾಚಲಪತಿ, ಅಕ್ಬರ್ ಬಾಷಾ, ದೇವೇಂದ್ರಪ್ಪ, ಮಹಂತೇಶ್, ರವಿ ಮಾವಿನಸರ ಸೇರಿದಂತೆ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

file 000000003f5c8208a0b120fec3430d9d7053830237624206656 ಶೇರುದಾರರ ಸಹಕಾರವೇ ಸಂಸ್ಥೆಯ ಬೆಳವಣಿಗೆಯ ಶಕ್ತಿ:  ಗಣೇಶ್ ವೈ

Leave a Reply

Your email address will not be published. Required fields are marked *

error: Content is protected !!