ಶಿವಮೊಗ್ಗ: ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್ಟೌನ್ 2025–26ನೇ ರೋಟರಿ ವರ್ಷದಲ್ಲಿ ಅಪೂರ್ವ ಸಾಧನೆ ದಾಖಲಿಸಿದ್ದು, ಹಾಸನದಲ್ಲಿ ನಡೆದ ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3182ರ ಸದಸ್ಯತ್ವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಕ್ಲಬ್ ಶ್ರೇಷ್ಠತಾ ಪ್ರಶಸ್ತಿ” ಸೇರಿದಂತೆ ಒಟ್ಟು 31 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ರೋಟೇರಿಯನ್ ಪಿಎಚ್‌ಎಫ್ ಹರ್ಷಾ ಬಿ. ಕಾಮತ್ ಅವರ ಅಧ್ಯಕ್ಷತೆಯಲ್ಲಿ ಕ್ಲಬ್ ಇಡೀ ವರ್ಷ 365 ದಿನಗಳಲ್ಲಿ 365 ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಯೋಜಿಸಿತು. ಸಮಾಜಮುಖಿ ಸೇವೆ, ಸದಸ್ಯತ್ವ ವೃದ್ಧಿ, ಸಾರ್ವಜನಿಕ ಸಂಪರ್ಕ, ವೃತ್ತಿಪರ ಸೇವೆ ಹಾಗೂ ಯುವಜನ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ಲಬ್ ಗಮನಾರ್ಹ ಕೆಲಸ ನಿರ್ವಹಿಸಿದೆ.

ಈ ಗೌರವ ನನ್ನೊಬ್ಬನದ್ದಲ್ಲ; ಇಡೀ ವರ್ಷದ ಸೇವಾ ಚಟುವಟಿಕೆಗಳಲ್ಲಿ ಕೈಜೋಡಿಸಿದ ಪ್ರತಿಯೊಬ್ಬ ಸದಸ್ಯ, ಯೋಜನಾ ನಿರ್ದೇಶಕ, ಆಡಳಿತ ಮಂಡಳಿ ಮತ್ತು ಸಹಕರಿಸಿದ ಎಲ್ಲರ ಪರಿಶ್ರಮಕ್ಕೆ ಸಂದ ಗೌರವವಾಗಿದೆ – ಹರ್ಷಾ ಬಿ. ಕಾಮತ್
ಕ್ಲಬ್‌ನ ಸಮಗ್ರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಕ್ಲಬ್ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ, ಪರಿಣಾಮಕಾರಿ ನಾಯಕತ್ವ ಮತ್ತು ಅತ್ಯುತ್ತಮ ಆಡಳಿತಕ್ಕಾಗಿ ಅಧ್ಯಕ್ಷ ಹರ್ಷಾ ಬಿ. ಕಾಮತ್ ಅವರಿಗೆ “ಅತ್ಯುತ್ತಮ ಅಧ್ಯಕ್ಷೀಯ ಕಾರ್ಯಕ್ಷಮತೆ ಪ್ರಶಸ್ತಿ” ಪ್ರದಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಹಾಗೂ ಜಿಲ್ಲಾ ರೋಟರಿ ತಂಡ ಪ್ರಶಸ್ತಿಗಳನ್ನು ಪ್ರದಾನಿಸಿ, ಶಿವಮೊಗ್ಗ ಮಿಡ್ಟೌನ್ ಕ್ಲಬ್‌ನ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಜಿಲ್ಲೆಯ ರೋಟರಿ ಸದಸ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಕ್ಲಬ್‌ನ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಮಾಜ ಸೇವೆಯಲ್ಲಿ ನಿರತರಾಗಿರುವ ಹರ್ಷ ಕಾಮತ್ ಅವರಿಗೆ “ನಾಡಿ ಮೀಡಿಯಾ ಹೌಸ್” ವತಿಯಿಂದ ಅಭಿನಂದನೆಗಳು ನಿಮ್ಮ ಸೇವೆ ಹೀಗೆ ಮುಂದುವರಿಯಲಿ.

















Leave a Reply