ಸಿ‌ಐ‌ಎಸ್‌ಸಿ‌ಇ ಅಥ್ಲೆಟಿಕ್ಸ್: ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾಂತೀಯ ಮಟ್ಟಕ್ಕೆ ಆಯ್ಕೆ

Add a heading 20260722 194738 0000 ಸಿ‌ಐ‌ಎಸ್‌ಸಿ‌ಇ ಅಥ್ಲೆಟಿಕ್ಸ್: ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾಂತೀಯ ಮಟ್ಟಕ್ಕೆ ಆಯ್ಕೆ
Spread the love
img 20260110 wa00003300842466822736300 ಸಿ‌ಐ‌ಎಸ್‌ಸಿ‌ಇ ಅಥ್ಲೆಟಿಕ್ಸ್: ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾಂತೀಯ ಮಟ್ಟಕ್ಕೆ ಆಯ್ಕೆ

ಕೋಣಂದೂರು: ಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಸಿ‌ಐ‌ಎಸ್‌ಸಿ‌ಇ ಜೋನಲ್ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದು, ಪ್ರಾಂತೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
17 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಎ.ಎಂ. ಮನೋಜ್ ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ, ಸಿ. ಗೋವರ್ಧನ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ರಾಯಣ್ಣ ಪಿ. ಗದ್ದೆ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಪ್ರಾಂತೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಎಚ್.ಎ. ಅಹನ್ ರಾವ್, ಸಿ. ಗೋವರ್ಧನ, ಎಚ್.ಆರ್. ನಿಹಾಲ್ ಕುಮಾರ್ ಹಾಗೂ ಎಂ.ಜಿ. ನಿಂಗರಾಜ್ ಅವರ ತಂಡ ಪ್ರಥಮ ಸ್ಥಾನ ಪಡೆದಿದೆ. 4×400 ಮೀಟರ್ ರಿಲೇಯಲ್ಲಿ ಎಚ್.ಆರ್. ನಿಹಾಲ್ ಕುಮಾರ್, ಜಿ.ಬಿ. ಧನುಷ್, ಎಂ.ಜಿ. ನಿಂಗರಾಜ್ ಹಾಗೂ ರಾಯಣ್ಣ ಪಿ. ಗದ್ದೆ ಅವರ ತಂಡ ತೃತೀಯ ಸ್ಥಾನ ಗಳಿಸಿದೆ. ಇದೇ ವೇಳೆ ಜಿ.ಬಿ. ಧನುಷ್ 1500 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಹಾಗೂ ಎಚ್.ಆರ್. ನಿಹಾಲ್ ಕುಮಾರ್ ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

14 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಎಂ.ಡಿ. ಸಿದ್ದಾರ್ಥ್ 400 ಮೀಟರ್ ಓಟದಲ್ಲಿ ಉತ್ತಮ ಸಾಧನೆ ಮಾಡಿದ್ದು, 4×100 ಮೀಟರ್ ರಿಲೇಯಲ್ಲಿ ಎಂ.ಡಿ. ಸಿದ್ದಾರ್ಥ್, ಅಂಗದ್ ಕೆ. ಗೌಡ, ಶಿವಲಿಂಗಸ್ವಾಮಿ ಕೆ. ವಾರಿಕಲ್ಮಠ ಹಾಗೂ ಅರವಿಂದ ಪಾಟೀಲ್ ಅವರ ತಂಡ ತೃತೀಯ ಸ್ಥಾನ ಪಡೆದಿದೆ.
ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲ ಕೆ.ಎಸ್. ವಾಸುದೇವ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ, ಪ್ರಾಂತೀಯ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *